ದಾವಣಗೆರೆ: ತಾಯಿಯೇ ಹೆತ್ತ ಮಗನನ್ನು ಗೃಹ ಬಂಧನದಲ್ಲಿಟ್ಟು ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಹೆತ್ತ ಮಗನನ್ನೇ ಗೃಹ ಬಂಧನದಲ್ಲಿಟ್ಟು ಹಿಂಸಿಸಿದ ತಾಯಿ! - ಗೃಹ ಬಂಧನ
ಹೆತ್ತ ಮಗನನ್ನೇ ಹಲವಾರು ತಿಂಗಳುಗಳಿಂದ ಕೋಣೆಯಲ್ಲಿ ಕೂಡಿಹಾಕಿ ತಾಯಿವೋರ್ವಳು ಅಮಾನವೀಯವಾಗಿ ನಡೆದುಕೊಂಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಹೆತ್ತ ಮಗನನ್ನೆ ಗೃಹ ಬಂಧನದಲ್ಲಿಟ್ಟ ತಾಯಿ
ನಗರದ ದೇವರಾಜ್ ಅರಸ್ ಬಡಾವಣೆಯ ಮನೆಯೊಂದರಲ್ಲಿ ತಾಯಿವೋರ್ವಳು ತನ್ನ ಮಗನನ್ನೇ ಮನೆಯಲ್ಲಿ ಕೂಡಿ ಹಾಕಿ ಮಾನಸಿಕ ಶಿಕ್ಷೆ ನೀಡುತ್ತಿದ್ದಳು. ಜೊತೆಗೆ ಕಳೆದ ಹಲವು ತಿಂಗಳಿಂದ ಮಗನನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದಳು ಎಂಬ ಆರೋಪ ಕೇಳಿಬಂದಿದೆ.
ವಿನಯ್ ಎಂಬಾತನೇ ಆ ನತದೃಷ್ಟ ಮಗ. ಸದ್ಯ ಆತನನ್ನು ಸ್ಥಳೀಯರು ಬಂಧನದಿಂದ ಮುಕ್ತಿಗೊಳಿಸಿದ್ದು, ಮಾನಸಿಕ ಅಸ್ವಸ್ಥನಾಗಿರುವ ಆತನನ್ನು ಆಸ್ಪತ್ರೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.