ದಾವಣಗೆರೆ:ವಾಲ್ಮೀಕಿ ಸಮಾಜದಿಂದ ರಾಜ್ಯದಲ್ಲಿ ಮುಂದೆ ಯಾರಾದ್ರೂ ಮುಖ್ಯಮಂತ್ರಿ ಆಗುವುದಿದ್ರೆ ಅದು ಸಚಿವ ಶ್ರೀರಾಮುಲು ಆಗುತ್ತಾರೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಭವಿಷ್ಯ ನುಡಿದಿದ್ದಾರೆ.
ನಾಯಕ ಸಮಾಜದಿಂದ ಶ್ರೀರಾಮುಲು ಮುಂದೆ ಸಿಎಂ ಆಗಬಹುದು: ಸಿದ್ದೇಶ್ವರ್ ಭವಿಷ್ಯ - ಸಂಸದ ಜಿ.ಎಂ ಸಿದ್ದೇಶ್ವರ್
ವಾಲ್ಮೀಕಿ ಸಮಾಜದಿಂದ ರಾಜ್ಯದಲ್ಲಿ ಮುಂದೆ ಯಾರಾದ್ರೂ ಮುಖ್ಯಮಂತ್ರಿ ಆಗುವುದಿದ್ರೆ ಅದು ಸಚಿವ ಶ್ರೀರಾಮುಲು ಆಗುತ್ತಾರೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಭವಿಷ್ಯ ನುಡಿದಿದ್ದಾರೆ.
ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ನಾಯಕರ ಸಂಘ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ನೀಡಬೇಕಿತ್ತು. ಆದ್ರೆ ಅವರಿಗೆ ಸಿಕ್ಕಿಲ್ಲ. ಮುಂದೆ ಉತ್ತಮ ಅವಕಾಶ ಸಿಗಲಿದೆ ಎಂದು ಹೇಳಿದರು. ಬಿಜೆಪಿಯಿಂದ ನಾಯಕ ಸಮಾಜದ ಸಿಎಂ ಎಂದು ಶ್ರೀರಾಮುಲು ಅವರನ್ನು ಬಿಂಬಿಸಲಾಗುತ್ತಿದೆ. ಇದಕ್ಕೆ ಜಗಳೂರಲ್ಲಿ ನಡೆಯುತ್ತಿರುವ ವಾಲ್ಮಿಕಿ ಜಯಂತಿ ಕಾರ್ಯಕ್ರಮ ನೋಡಿದರೆ ಹಾಗೆ ಅನಿಸುತ್ತದೆ ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಶ್ರೀರಾಮುಲು ಅವರನ್ನು ಡಿಸಿಎಂ ಮಾಡಬೇಕೆಂಬ ಒತ್ತಾಯ ಕೇಳಿಬಂದಿತ್ತು. ಆದ್ರೂ ರಾಮುಲುಗೆ ಉಪ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಿತ್ತು. ಇದೀಗ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ಚರ್ ನೀಡಿರುವ ಹೇಳಿಕೆ ನಾಯಕ ಸಮಾಜಕ್ಕೆ ಖುಷಿ ನೀಡಿದ್ದು, ಈ ಮೂಲಕ ಶ್ರೀರಾಮುಲು ಸಿಎಂ ಆಗುವ ಆಸೆಗೆ ಬಲ ಬಂದಂತಾಗಿದೆ.