ಕರ್ನಾಟಕ

karnataka

ETV Bharat / state

ಕೊರೊನಾ ವಿಚಾರದಲ್ಲಿ ಸರ್ಕಾರದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ : ರೇಣುಕಾಚಾರ್ಯ

ನಾನು ಕೊರೊನಾ ಸೋಂಕಿತರಿಗೆ ಊಟ ಬಡಿಸಿದ್ದೇನೆ. ಅವರ ಜೊತೆಗೆ ಓಡಾಡಿದ್ದೇನೆ. ಫುಡ್ ಕಿಟ್ ವಿತರಿಸಿದ್ದೇನೆ. ನಾನು ಐದು ಬಾರಿ ಪರೀಕ್ಷೆ ಮಾಡಿಸಿದ್ದು, ನೆಗೆಟಿವ್ ಬಂದಿದೆ. ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಮಾಸ್ಕ್ ಧರಿಸಬೇಕು. ಸೋಂಕು ಬಂದರೆ ಹೆದರುವ ಅವಶ್ಯಕತೆ ಇಲ್ಲ.

ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ
ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ

By

Published : Aug 30, 2020, 5:05 PM IST

Updated : Aug 30, 2020, 6:39 PM IST

ದಾವಣಗೆರೆ :ಕೊರೊನಾ ವಿಚಾರದಲ್ಲಿ ರಾಜ್ಯ ಸರ್ಕಾರದ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ. ಅದರ ಬಗ್ಗೆ ಯಾರೂ ಕಿವಿಗೊಡಬಾರದು. ವದಂತಿಗಳನ್ನು ನಂಬಬೇಡಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಹೇಳಿದ್ದಾರೆ.

ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ

ಹೊನ್ನಾಳಿ ಪಟ್ಟಣದಲ್ಲಿ ಮಾತನಾಡಿದ ಅವರು, ಕೊರೊನಾ ನೆಗೆಟಿವ್ ಬಂದರೂ ಪಾಸಿಟಿವ್ ಅಂತೇಳಿ ಸರ್ಕಾರ ಹಣ ಲೂಟಿ ಮಾಡುತ್ತಿದೆ ಎಂಬ ಸುಳ್ಳು ಪ್ರಚಾರ ನಡೆಸಲಾಗುತ್ತಿದೆ‌. ಪಾಸಿಟಿವ್ ಬಂದರೆ ಮಾತ್ರ ಕರೆದೊಯ್ಯುತ್ತಾರೆ ವಿನಾಃ ಸುಮ್ಮನೆ ಕರೆದುಕೊಂಡು ಹೋಗುವುದಿಲ್ಲ. ಆರ್​ಟಿಐನಲ್ಲಿ ಮಾಹಿತಿ ಬೇಕಾದರೆ ಪಡೆಯಲಿ. ಅದನ್ನು ಬಿಟ್ಟು ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕೆಲವರು ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದರು.

ನಾನು ಕೊರೊನಾ ಸೋಂಕಿತರಿಗೆ ಊಟ ಬಡಿಸಿದ್ದೇನೆ. ಅವರ ಜೊತೆಗೆ ಓಡಾಡಿದ್ದೇನೆ. ಫುಡ್ ಕಿಟ್ ವಿತರಿಸಿದ್ದೇನೆ. ನಾನು ಐದು ಬಾರಿ ಪರೀಕ್ಷೆ ಮಾಡಿಸಿದ್ದು, ನೆಗೆಟಿವ್ ಬಂದಿದೆ. ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಮಾಸ್ಕ್ ಧರಿಸಬೇಕು. ಸೋಂಕು ಬಂದರೆ ಹೆದರುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

Last Updated : Aug 30, 2020, 6:39 PM IST

ABOUT THE AUTHOR

...view details