ದಾವಣಗೆರೆ: ಜಿಲ್ಲೆಯ ಹೊನ್ನಾಳಿ ಭಾಗದಲ್ಲಿ ಅಪಾರ ಭಕ್ತ ಸಮೂಹವನ್ನು ಹೊಂದಿದ್ದ ಹೊನ್ನಾಳಿ ತಾಲ್ಲೂಕಿನ ಹೊಟ್ಯಾಪುರ ಹಿರೇಕಲ್ಮಠದ ಶ್ರೀ ಗಿರಿಸಿದ್ದೇಶ್ವರ್ ಶಿವಾಚಾರ್ಯ ಸ್ವಾಮೀಜಿ (62) ಇಂದು ಬೆಳಗ್ಗೆ ಲಿಂಗಕ್ಯರಾಗಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಸ್ವಾಮೀಜಿ ಶಿವಮೊಗ್ಗ ಮೆಟ್ರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೊಟ್ಯಾಪುರ ಹಿರೇಕಲ್ಮಠ ಮಾಹಿತಿ ನೀಡಿದೆ.
ದಾವಣಗೆರೆ: ಹೊಟ್ಯಾಪುರ ಹಿರೇಕಲ್ಮಠದ ಶ್ರೀ ಗಿರಿಸಿದ್ದೇಶ್ವರ್ ಶಿವಾಚಾರ್ಯ ಸ್ವಾಮೀಜಿ ಲಿಂಗಕ್ಯ - ಅಂತಿಮ ದರ್ಶನ
ಕಳೆದ ಕೆಲ ದಿನಗಳಿಂದ ಗಿರಿಸಿದ್ದೇಶ್ವರ್ ಶಿವಾಚಾರ್ಯ ಸ್ವಾಮೀಜಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು.
ಶ್ರೀ ಗಿರಿಸಿದ್ದೇಶ್ವರ್ ಶಿವಾಚಾರ್ಯ ಸ್ವಾಮೀಜಿ ಲಿಂಗಕ್ಯ
ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಮೃತರ ಪಾರ್ಥಿವ ಶರೀರವನ್ನು ಹೊಟ್ಯಾಪುರಕ್ಕೆ ತರಲಾಗುತ್ತದೆ. ಶ್ರೀಗಳ ನಿಧನದಿಂದ ಹೊಟ್ಯಾಪುರ ಮಠದಲ್ಲಿ ನೀರವ ಮೌನ ಆವರಿಸಿದ್ದು, ಮಠಕ್ಕೆ ಆಪಾರ ಸಂಖ್ಯೆಯ ಭಕ್ತರು ಶ್ರೀಯವರ ಅಂತಿಮ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ಕೂಡ ನೇಮಿಸಲಾಗಿದೆ.
ಇದನ್ನೂ ಓದಿ:ಆರ್ಎಸ್ಎಸ್ ಹಿರಿಯ ಪ್ರಚಾರಕ ಮದನ್ ದಾಸ್ ದೇವಿ ನಿಧನ: ಭಾಗವತ್ ಸೇರಿ ಗಣ್ಯರ ಸಂತಾಪ