ಕರ್ನಾಟಕ

karnataka

ETV Bharat / state

ಮಹಾನಗರ ಪಾಲಿಕೆ ಚುನಾವಣೆಯಲ್ಲಿ 40 ಸ್ಥಾನಗಳು ನಮ್ದೇ: ಶಾಮನೂರು ಶಿವಶಂಕರಪ್ಪ - ಮಹಾನಗರ ಪಾಲಿಕೆ ಚುನಾವಣೆ ಸುದ್ದಿ

ಮಹಾನಗರ ಪಾಲಿಕೆ ಚುನಾವಣೆಗೆ ಕೆಲವೇ ಕೆಲವು ದಿನಗಳು ಬಾಕಿ ಇದ್ದು, ಚುನಾವಣಾ ಕಣ ರಂಗೇರುತ್ತಿದೆ. ಇಂದು ಕಾಂಗ್ರೆಸ್​ ಅಭ್ಯರ್ಥಿಯ ಪರ ಪ್ರಚಾರ ಕಾರ್ಯದಲ್ಲಿ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಭಾಗವಹಿಸಿದ್ದರು.

Shamanur shivashankarappa , ಶಾಮನೂರು ಶಿವಶಂಕರಪ್ಪ

By

Published : Nov 8, 2019, 8:40 PM IST

ದಾವಣಗೆರೆ :ಮಹಾನಗರ ಪಾಲಿಕೆಯ 45 ಸ್ಥಾನಗಳ ಪೈಕಿ 40 ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸುತ್ತಾರೆ. ನಾನು ಪ್ರಚಾರಕ್ಕೆ ಧುಮುಕಿದ್ದು, ಎಲ್ಲೆಡೆ ಕೈ ಪರ ಅಲೆ ಕಂಡು ಬರುತ್ತಿದೆ ಎಂದು ಕಾಂಗ್ರೆಸ್​ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ

ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ತೆರಳುವ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್​ಗೆ ಹೆಚ್ಚಿನ ಜನ ಬೆಂಬಲ ಸಿಗುತ್ತಿದೆ. ಗೆಲ್ಲುವ ವಿಶ್ವಾಸ ಇದೆ. ಬಿಜೆಪಿಯವರ ಮಾತನ್ನು ಯಾರೂ ನಂಬುವುದಿಲ್ಲ. ಅವರು ಸುಳ್ಳು ಹೇಳಿಕೊಂಡು ಓಡಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಸಂಪೂರ್ಣ ಬಹುಮತ ಪಡೆಯುತ್ತದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಹೇಳ್ತಾರೆ ಗೆಲ್ತೇವೆ ಅಂತ, ನಾವೂ ಅದನ್ನೇ ಹೇಳುತ್ತೇವೆ. ನ.14ರಂದು ಫಲಿತಾಂಶ ಹೊರ ಬಿದ್ದ ಮೇಲೆ ಯಾರು ಗೆಲ್ಲುತ್ತಾರೆ ಎಂಬುದು ಗೊತ್ತಾಗಲಿದೆ ಎಂದರು.

ABOUT THE AUTHOR

...view details