ಕರ್ನಾಟಕ

karnataka

ಚಂದ್ರು ಸಾವಿನ ಪ್ರಕರಣದಲ್ಲಿ ಪೊಲೀಸರ ತನಿಖೆ ವಿಫಲ: ರೇಣುಕಾಚಾರ್ಯ

By

Published : Nov 5, 2022, 4:24 PM IST

Updated : Nov 5, 2022, 4:33 PM IST

ಚಂದ್ರು ಸಾವಿನ ಪ್ರಕರಣಕ್ಕೆ ರೇಣುಕಾಚಾರ್ಯ ಪ್ರತಿಕ್ರಿಯಿಸಿ ನನ್ನ ಮಗನದು ಅಪಘಾತವಲ್ಲ ಅದು ಕೊಲೆ ಎಂದು ಆರೋಪಿಸಿದ್ದಾರೆ.

kn_dvg_
ರೇಣುಕಾಚಾರ್ಯ

ದಾವಣಗೆರೆ: ಚಂದ್ರುದು ಅಪಘಾತ ಅಲ್ವೇ ಅಲ್ಲ ಇದು ಪ್ರೀ ಪ್ಲಾನ್ ಮರ್ಡರ್. ಕಾರಿನಲ್ಲಿ ಪತ್ತೆಯಾದ ಚಂದ್ರು ಶವದ ಕಾಲಿಗೆ ಕೈಗೆ ಬಿಳಿಬಟ್ಟೆ ಕಟ್ಟಿದ್ದಾರೆ‌, ಇದು ಅಪಘಾತವಲ್ಲ ಕೊಲೆ ಎಂದು ಶಾಸಕ ಎಂಪಿ ರೇಣುಕಾಚಾರ್ಯ ಆರೋಪಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ತಮ್ಮ ನಿವಾಸದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಎಲ್ಲೋ ನನ್ನ ರಾಜಕೀಯ ವರ್ಚಸ್ಸು ಸಹಿಸದೇ ಕೆಲ ಶಿಖಂಡಿಗಳು, ಹೇಡಿಗಳು ನನ್ನ ಮಗನನ್ನು ಬಲಿ ಪಡೆದಿದ್ದಾರೆ. ಈ ಪೊಲೀಸ್​ ತನಿಖೆಯಿಂದ ನನಗೆ ವಿಶ್ವಾಸ ಇಲ್ಲ. ಅಧಿಕಾರದಲ್ಲಿದ್ದು ನಿಮ್ಮ ಮಗನ ಪ್ರಕರಣದ ತನಿಖೆ ಸರಿಯಾಗಿಲ್ಲ ಎಂದು ಜನ ಕೇಳುತ್ತಿದ್ದಾರೆ.

ಇನ್ನು ಈ ಹಿಂದೆ ದುಬೈನಿಂದ ನನಗೆ ಕೊಲೆ ಬೆದರಿಕೆ ಬಂದು ಒಂದು ವರ್ಷ ಆಯಿತು. ಅದರಲ್ಲಿ ಕೆಟ್ಟದಾಗಿ ಮಾತನಾಡಿದ್ದಾಗ ಸದಾಶಿವನಗರ ಪೊಲೀಸ್​ ಠಾಣೆಯಲ್ಲಿ ದೂರು ಕೊಟ್ಟಿದ್ದೆ. ಅದೇ ತನಿಖೆಯನ್ನು ಪೊಲೀಸರು ಸರಿಯಾಗಿ ಮಾಡಲಿಲ್ಲ ನನಗೆ ಏನೂ ಕೇಳಲಿಲ್ಲ, ನನ್ನ ಮಗ ಸಾವನ್ನಪ್ಪಿ ಆರು ದಿನವಾಗಿದೆ.

ಚಂದ್ರು ಸಾವಿನ ಪ್ರಕರಣದ ಬಗ್ಗೆ ರೇಣುಕಾಚಾರ್ಯ ಪ್ರತಿಕ್ರಿಯೆ

ಪೊಲೀಸ್​ ಇಲಾಖೆಯವರು ಡ್ರೋಣ್ ತರಿಸಲಿಲ್ಲ, ಬದಲಿಗೆ ನಮ್ಮ ಕಾರ್ಯಕರ್ತರು ಡ್ರೋಣ್ ತರಿಸಿ ಚಂದ್ರು ಕಾರನ್ನು ಪತ್ತೆ ಹಚ್ಚಿದ್ದು, ಸಿಸಿಟಿವಿಗಳನ್ನು ಪರಿಶೀಲಿಸಿದ್ದು ನಮ್ಮ ಕಾರ್ಯಕರ್ತರು. ಪೊಲೀಸರು ಹೇಳ್ತಾರೆ ಮೊದಲಿಗೆ 6:48 ನಿಮಿಷಕ್ಕೆ ಚಂದ್ರುವಿನ ಮೊಬೈಲ್ ಸ್ವಿಚ್ಡ್​ ಆಫ್ ಆಗಿದೆ ಎಂದು ಆದರೆ ನಿಜವಾಗಿಯೂ 12:06 ಗಂಟೆಗೆ ಮೊಬೈಲ್ ಸ್ವಿಚ್ಡ್​ ಆಫ್ ಆಗಿದೆ ಎಂದರು.

ಇದು ಓವರ್ ಸ್ಪೀಡ್ ಅಪಘಾತ ಅಲ್ವೇ ಅಲ್ಲ, ಕಾರು ಓವರ್ ಸ್ಪೀಡ್ ಇದ್ದರೆ ಮುಂದಿನ ಸೀಟ್​ನಲ್ಲಿ ಚಂದ್ರು ಮೃತ ದೇಹ ಇರಬೇಕಿತ್ತು. ಅದರೆ, ಮೃತದೇಹ ಮಾತ್ರ ಹಿಂದಿನ ಸೀಟ್​ನಲ್ಲಿದೆ. ಸೀಟ್ ಹೆಡ್ ರೆಸ್ಟ್ ಗು ಟಾಪ್ ಗು ಗ್ಯಾಪ್ ಕಡಿಮೆ ಇರುತ್ತದೆ, ಹಿಂದಿನ ಸೀಟ್​​​​ಗೆ ಹೋಗಲು ಸಾಧ್ಯವೇ ಇಲ್ಲ, ಎಲ್ಲೋ ನನ್ನ ಚಂದ್ರುನ ಹತ್ಯೆ ಮಾಡಿದ್ದಾರೆ ಇಲ್ಲಿ ತಂದು ಹಾಕಿದ್ದಾರೆ. ಪೊಲೀಸ್​ ಇಲಾಖೆ ಸಂಪೂರ್ಣವಾಗಿ ತನಿಖೆ ಮಾಡುವಲ್ಲಿ ವಿಫಲ ಆಗಿದೆ. ಪೊಲೀಸರು ನನ್ನ ಮಗನನ್ನು ರಕ್ಷಣೆ ಮಾಡದವರು ಜನರನ್ನು ರಕ್ಷಣೆ ಮಾಡುತ್ತಾರ ಎಂದು ಪ್ರಶ್ನಿಸಿದರು.

ತನಿಖೆ ಸಂಪೂರ್ಣ ವಿಫಲ ಆಗಿದೆ:ಚಂದ್ರು ಸಾವಿನ ಪ್ರಕರಣದಲ್ಲಿ ಪೊಲೀಸರ ತನಿಖೆ ಸಂಪೂರ್ಣ ವಿಫಲವಾಗಿದೆ. ಇವರು ಅಪರಾಧಿಗಳನ್ನು ನಿರಪರಾಧಿ ಮಾಡುತ್ತಾರೆ, ನಿರಪರಾಧಿಗಳನ್ನು ಅಪರಾಧಿಗಳನ್ನಾಗಿ ಮಾಡುತ್ತಾರೆ. ನಿಮ್ಮ ತನಿಖೆಯಲ್ಲಿ ವಿಶ್ವಾಸ ಇಲ್ಲ‌ ಎಂದರು.

ಇದನ್ನೂ ಓದಿ:ಬಸವಲಿಂಗ ಸ್ವಾಮೀಜಿ ‌ಆತ್ಮಹತ್ಯೆ ಪ್ರಕರಣ: ಆರೋಪಿಗಳಿಗೆ ನ.15ರ ವರೆಗೆ ನ್ಯಾಯಾಂಗ ಬಂಧನ

Last Updated : Nov 5, 2022, 4:33 PM IST

ABOUT THE AUTHOR

...view details