ಕರ್ನಾಟಕ

karnataka

ETV Bharat / state

ಚೀನಾ ಕಂಪನಿ ಕಾರ್‌ನಲ್ಲಿ ರೇಣುಕಾಚಾರ್ಯ ತಿರುಗಾಟ; ಸಾರ್ವಜನಿಕರ ಟೀಕೆ - Davangere

ರಾಜಕಾರಣಿಗಳು ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿ ಮಾಡುವುದು ಸಾಮಾನ್ಯ. ಆದರೆ, ರೇಣುಕಾಚಾರ್ಯ ಚೀನಾ ಮೂಲದ್ದೆನ್ನಲಾದ ಎಂಜಿ ಕಂಪನಿಯ ನೂತನ ಎಂಜಿ ಗ್ಲೋಸ್ಟರ್ ಕಾರು ಖರೀದಿಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Renukacharya
ದಾವಣಗೆರೆಗೆ ಆಗಮಿಸಿದ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ

By

Published : Dec 13, 2020, 6:39 PM IST

ದಾವಣಗೆರೆ: ಸದಾ‌ ಒಂದಲ್ಲೊಂದು ಸುದ್ದಿಯಲ್ಲಿರುವ ಸಿಎಂ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಬಿಜೆಪಿ‌ ಶಾಸಕ ಎಂ.ಪಿ.ರೇಣುಕಾಚಾರ್ಯ, ಚೀನಾ ಮೂಲದ ಕಂಪನಿಯ ಕಾರು ಖರೀದಿಸಿ ಸುದ್ದಿಯಲ್ಲಿದ್ದಾರೆ. ಈ ಮೂಲಕ ಅವರು ನೆಟ್ಟಿಗರ ಟೀಕೆಗೆ ಗುರಿಯಾಗಿದ್ದಾರೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಅವರು ಇಂದು ಅದೇ ಕಂಪನಿಯ ಕಾರಿನಲ್ಲಿ ದಾವಣಗೆರೆಗೆ ಬಂದಿಳಿದ್ದಾರೆ.

ಎಂಜಿ ಕಂಪನಿಯ ಕಾರಿನಲ್ಲಿ ದಾವಣಗೆರೆಗೆ ಆಗಮಿಸಿದ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ

ಓದಿ:ವಿದೇಶಿ ಕಾರು ಖರೀದಿಸಿ ಟೀಕೆಗೊಳಗಾದ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ..

ದಾವಣಗೆರೆ ಹೊರವಲಯದಲ್ಲಿರುವ ಕೈಗಾರಿಕಾ ಪ್ರದೇಶದ ಕೂಗಳತೆಯಲ್ಲಿರುವ ಖಾಸಗಿ ಶಾಲೆಗೆ ಭೇಟಿ ನೀಡಿದ ರೇಣುಕಾಚಾರ್ಯ, ಕೇದಾರ ಶ್ರೀ, ರಂಭಾಪುರಿ ಶ್ರೀಯವರ ಆಶೀರ್ವಾದ ಪಡೆದರು.

ಎಂಜಿ ಕಾರಿನಲ್ಲಿ ತಿರುಗಾಡುತ್ತಿರುವ ಬಗ್ಗೆ ಶಾಸಕರನ್ನು ಪ್ರಶ್ನಿಸಿದರೆ, ಇದು ಚೀನಾ ಮೂಲದ ಕಂಪನಿಯ ಕಾರು ಅಲ್ಲ. ಗುಜರಾತ್​​ನಲ್ಲಿ ಖರೀದಿ ಮಾಡಿದ್ದೇನೆ ಎಂದರು.

ABOUT THE AUTHOR

...view details