ಕರ್ನಾಟಕ

karnataka

ETV Bharat / state

ಬಡವರ ಹಸಿವಿಗೆ ಮಿಡಿದ ಪೊಲೀಸ್​ ಹೃದಯ....! - ಚನ್ನಗಿರಿ ಬೆಂಕಿ‌ಕೆರೆ ಗ್ರಾಮದ ಕುಬೇಂದ್ರಪ್ಪ

ಚನ್ನಗಿರಿ ಪಿಎಸ್ಐ ಜಗದೀಶ್ ಬಡ ಕುಟುಂಬಕ್ಕೆ ತಮ್ಮ ವೈಯಕ್ತಿಕ ಹಣದಿಂದ ಆಹಾರದ ಕಿಟ್ ವಿತರಣೆ ಮಾಡಿದ್ದು, ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.

 Police help to poor people
Police help to poor people

By

Published : May 18, 2021, 7:55 PM IST

Updated : May 18, 2021, 10:36 PM IST

ದಾವಣಗೆರೆ: ಲಾಕ್​​ಡೌನ್ ನಿಂದ ಕೂಲಿ ಇಲ್ಲದೇ ತುತ್ತು ಅನ್ನಕ್ಕೆ ಪರದಾಡುತ್ತಿದ್ದ ಕುಟುಂಬವೊಂದಕ್ಕೆ ಪಿಎಸ್ಐಯೊಬ್ಬರು ಆಹಾರದ ಕಿಟ್ ವಿತರಿಸಿ ಸಹಾಯದ ಹಸ್ತ ಚಾಚಿದ್ದಾರೆ.

ಚನ್ನಗಿರಿ ಬೆಂಕಿ‌ಕೆರೆ ಗ್ರಾಮದ ಕುಬೇಂದ್ರಪ್ಪ ಎನ್ನುವರು ಕೂಲಿ ಮಾಡಿ ಜೀವನ ನಡೆಸುತ್ತಿದ್ದು, ಲಾಕ್​​ಡೌನ್ ನಿಂದಾಗಿ ಕೂಲಿ ಸಿಗದೇ ಇತ್ತ ತಿನ್ನಲು ಆಹಾರ ಧಾನ್ಯ ಇಲ್ಲದೇ ಪರದಾಡುತ್ತಿದ್ದರು.

ಬಡ ಕುಟುಂಬಕ್ಕೆ ಆಹಾರ ಸಾಮಗ್ರಿ ವಿತರಿಸಿದ ಪಿಎಸ್​ಐ ​

ಪೊಲೀಸ್ ಇಲಾಖೆಯ 112 ಗೆ ಕರೆ ಮಾಡಿ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದು, ಇದಕ್ಕೆ ಸ್ಪಂದಿಸಿದ ಚನ್ನಗಿರಿ ಪಿಎಸ್ಐ ಜಗದೀಶ್ ಬಡ ಕುಟುಂಬಕ್ಕೆ ತಮ್ಮ ವೈಯಕ್ತಿಕ ಹಣದಿಂದ ಆಹಾರದ ಕಿಟ್ ವಿತರಣೆ ಮಾಡಿದ್ದು, ಕುಟುಂಬಕ್ಕೆ ಧೈರ್ಯ ತುಂಬಿದರು.

ಅಲ್ಲದೇ ಮುಂದೆ ಏನಾದರೂ ಆಹಾರದ ಕಿಟ್ ಬೇಕಾದ್ರೆ ತಂದು ಕೊಡುವುದಾಗಿ ಅಭಯ ನೀಡಿದರು.

Last Updated : May 18, 2021, 10:36 PM IST

ABOUT THE AUTHOR

...view details