ದಾವಣಗೆರೆ:ರಾಮ ಮಂದಿರ ನಿರ್ಮಾಣ ಮಾಡಲು ಸಂಬಂಧಪಟ್ಟ ಹಿಂದೂಪರ ಸಂಘಟನೆಗಳು ದೇಣಿಗೆ ಎತ್ತುತ್ತಿವೆ. ಈ ನಡುವೆ ಜಿಲ್ಲೆಯಲ್ಲಿ ಮೊದಲಿಗರಾಗಿ ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಂ ಮುಖಂಡನೋರ್ವ ದೇಣಿಗೆ ನೀಡಿ ಸಾಮಾಜಿಕ ಸಾಮರಸ್ಯ ಮೆರೆದಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕೆ ದಾವಣಗೆರೆ ಜಿಲ್ಲೆಯಲ್ಲೇ ಪ್ರಥಮ ದೇಣಿಗೆ ನೀಡಿದ ಮುಸ್ಲಿಂ ಮುಖಂಡ - Ram Mandir construction
ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಂ ಮುಖಂಡನೋರ್ವ ದೇಣಿಗೆ ನೀಡಿ ಸಾಮರಸ್ಯ ಮೆರೆದಿದ್ದಾರೆ. ಇದು ದಾವಣಗೆರೆ ಜಿಲ್ಲೆಯಲ್ಲೇ ಮುಸ್ಲಿಂ ವ್ಯಕ್ತಿ ನೀಡಿದ ಮೊದಲ ದೇಣಿಗೆ.
ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ ಮುಸ್ಲಿಂ ಮುಖಂಡ
ಮೂಲತಃ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಗ್ರಾ.ಪಂ ಮಾಜಿ ಸದಸ್ಯ ಮುಸ್ತಫೀಜ್ ಉಲ್ಲಾ ರಾಮ ಮಂದಿರ ನಿರ್ಮಾಣ ಮಾಡಲು ದೇಣಿಗೆ ನೀಡಿದ್ದಾರೆ. ಸದ್ಯ ಎಷ್ಟು ಹಣವನ್ನು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಇವರು ಮುಸ್ಲಿಂ ಸಮುದಾಯದ ಹಿರಿಯ ಮುಖಂಡ ಮಹಮದ್ ಶಬ್ಬೀರ್ ಪುತ್ರ.
ಆರ್‌ಎಸ್‌ಎಸ್ ಸ್ವಯಂ ಸೇವಕರಿಗೆ ದೇಣಿಗೆ ನೀಡಿದ ಮುಸ್ತಫೀಜ್‌ಉಲ್ಲಾರವರು ಶ್ರೀರಾಮ ಭಾವೈಕ್ಯತೆ ಸಂಕೇತ ಎಂದು ಸಂದೇಶ ರವಾನಿಸಿದ್ದಾರೆ.