ದಾವಣಗೆರೆ: ಮದುವೆ ಊಟ ಸೇವಿಸಿ 150ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹಳೇದೇವರಹೊನ್ನಾಳಿ ಗ್ರಾಮದಲ್ಲಿ ನಿನ್ನೆ ನಡೆದಿದೆ. ಚಂದ್ರಪ್ಪ ಎಂಬುವರ ವಿವಾಹ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಊಟ ಮಾಡಿದ್ದ 150ಕ್ಕೂ ಹೆಚ್ಚು ಜನರು ವಾಂತಿ - ಭೇದಿಯಿಂದ ಅಸ್ವಸ್ಥರಾಗಿದ್ದಾರೆ.
ಮದುವೆ ಮನೆಯಲ್ಲಿ ಊಟ ಮುಗಿಸಿ ಮನೆಗೆ ವಾಪಸಾದ ಬಳಿಕ ರಾತ್ರಿ ವೇಳೆ ವಾಂತಿ ಭೇದಿ ಕಾಣಿಸಿಕೊಂಡಿದೆ, ಹೀಗಾಗಿ ತಕ್ಷಣ ಅವರನ್ನ ಹೊನ್ನಾಳಿ ಆಸ್ಪತ್ರೆಗೆ (Honnali hospital) ರವಾನಿಸಲಾಗಿದೆ. ಇವರಲ್ಲಿ 10 ಮಂದಿಯನ್ನ ಶಿವಮೊಗ್ಗದ ಮೆಗ್ಗಾನ್ (Shivamogga District Hospital) ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.