ಕರ್ನಾಟಕ

karnataka

ETV Bharat / state

ಯಡಿಯೂರಪ್ಪನವರನ್ನು ಯಾವತ್ತೂ ಮಾಜಿ ಸಿಎಂ ಅಂತ ಕರೆಯಲ್ಲ: ರೇಣುಕಾಚಾರ್ಯ - ಹೊನ್ನಾಳಿ ಶಾಸಕ

ಹೊನ್ನಾಳಿ ಪಟ್ಟಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪರನ್ನು ನೆನೆದು ಶಾಸಕ ರೇಣುಕಾಚಾರ್ಯ ಭಾವುಕರಾದರು.

MLA Renukacharya tears
ಬಿಎಸ್​ವೈ ನೆನೆದು ರೇಣುಕಾಚಾರ್ಯ ಭಾವುಕ

By

Published : Aug 3, 2021, 7:29 AM IST

ದಾವಣಗೆರೆ:ನನ್ನ ಜೀವನದಲ್ಲಿ ಯಾವತ್ತೂ ಯಡಿಯೂರಪ್ಪನವರನ್ನು ಮಾಜಿ ಮುಖ್ಯಮಂತ್ರಿ ಅಂತ ಕರೆಯುವುದಿಲ್ಲ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದರು.

ಮಾಜಿ ಸಿಎಂ ನೆನೆದು ಭಾವುಕರಾದ ಶಾಸಕ ರೇಣುಕಾಚಾರ್ಯ

ಹೊನ್ನಾಳಿ‌ ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ನಡೆದ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಾ, ಎಲ್ಲೋ ಇದ್ದಿದ್ದ ನನ್ನ ರಾಜಕೀಯಕ್ಕೆ ತಂದು ಶಾಸಕನಾಗಿ ಮಾಡಿದರು. ಅವರನ್ನು ಯಾವತ್ತೂ ಮಾಜಿ ಸಿಎಂ ಅಂತ ಕರೆಯುವುದಿಲ್ಲ ಎಂದರು.

ಇದನ್ನೂಓದಿ: ನಾನು ಸಚಿವನಾಗಬೇಕೆಂದು ಲಾಬಿ ಮಾಡಿಲ್ಲ, ದೆಹಲಿಗೂ ಹೋಗಿಲ್ಲ: ರೇಣುಕಾಚಾರ್ಯ

ಇದೇ ವೇಳೆ, ಹೊನ್ನಾಳಿ- ನ್ಯಾಮತಿ ತಾಲೂಕುಗಳ ಅಭಿವೃದ್ಧಿ ಕಾರ್ಯಗಳಿಗೆ ನೀಡಿರುವ ಅನುದಾನವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಅವಳಿ ತಾಲೂಕುಗಳಿಗೆ ಯಡಿಯೂರಪ್ಪ ನೀಡಿದ ಕೊಡುಗೆ ಅಪಾರ. ಸಾವಿರಾರು ಕೋಟಿ ರೂಪಾಯಿ ಅನುದಾನ ಒದಗಿಸಿದ್ದಾರೆ. ಅವರು ನೀಡಿರುವ ಕೊಡುಗೆಯನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ABOUT THE AUTHOR

...view details