ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ, ಖರ್ಗೆ,‌ ಡಿಕೆಶಿ ಹೀಗೆ ಹತ್ತಾರು ಗುಂಪುಗಳಿವೆ: ರೇಣುಕಾಚಾರ್ಯ - Etv bharat kannada

ಮುಖ್ಯಮಂತ್ರಿ ಬದಲಾವಣೆ ಮಾಡಲಾಗುತ್ತದೆ ಎಂಬ ಕಾಂಗ್ರೆಸ್​ನವರ ಹೇಳಿಕೆ ಮೂರ್ಖತನದ್ದು ಎಂದು ಶಾಸಕ ರೇಣುಕಾಚಾರ್ಯ ದಾವಣಗೆರೆಯಲ್ಲಿ ಹೇಳಿದ್ದಾರೆ.

MLA Renukacharya spoke in Davangere
ದಾವಣಗೆರೆಯಲ್ಲಿ ಮಾತನಾಡಿದ ಶಾಸಕ ರೇಣುಕಾಚಾರ್ಯ

By

Published : Aug 9, 2022, 4:54 PM IST

ದಾವಣಗೆರೆ:ಕಾಂಗ್ರೆಸ್​ನವರು ಮೂರ್ಖತನದ ಹೇಳಿಕೆ‌ ಕೊಡುವುದು ಸಾಮಾನ್ಯ.‌ ಬಿಎಸ್​ವೈ ಬಗ್ಗೆ ಕೂಡ ಹೀಗೆಯೇ ಅಪಪ್ರಚಾರ ಮಾಡಿದ್ದರು. ಯಾವುದೇ ಕಾರಣಕ್ಕೂ ಸಿಎಂ ಬದಲಾಗುವುದಿಲ್ಲ. ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ, ಖರ್ಗೆ,‌ ಡಿಕೆಶಿ ಹೀಗೆ ಅವರವರ ಹತ್ತಾರು ಗುಂಪುಗಳಿವೆ. ಕಾಂಗ್ರೆಸ್‌ನಲ್ಲಿರುವ ಭಿನ್ನಾಭಿಪ್ರಾಯಗಳು ಜನ್ರಿಗೆ ತಿಳಿಯುತ್ತೆಂದು ಸಿಎಂ ಬದಲಾಗುವ ಅಪಪ್ರಚಾರ ಮಾಡ್ತಿದ್ದಾರೆ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ದಾವಣಗೆರೆಯಲ್ಲಿ ಮಾತನಾಡಿದ ಶಾಸಕ ರೇಣುಕಾಚಾರ್ಯ

ಹೊನ್ನಾಳಿ ಬಳಿಯ ತುಂಗಭದ್ರಾ ನದಿಗೆ ಬಾಗಿನ‌‌ ಅರ್ಪಿಸಿದ‌‌ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಮಾಡಲಾಗುತ್ತದೆ ಎಂಬ ಕಾಂಗ್ರೆಸ್​ನವರ ಹೇಳಿಕೆ ಮೂರ್ಖತನದ್ದು. ನಮ್ಮದು ಅಭಿವೃದ್ಧಿ ಪರ ಚಿಂತಿಸುವ ಸರ್ಕಾರ. ಕಾಂಗ್ರೆಸ್​ನವರು ಹೇಳುವುದೆಲ್ಲ ಹಸಿ ಸುಳ್ಳು, ಅವರು ಭ್ರಮೆ ಹಾಗೂ ಮಾಯಾಲೋಕದಲ್ಲಿ ತೇಲಾಡುತ್ತಿದ್ದಾರೆ ಎಂದರು.

ಸಾಧನ ಸಮಾವೇಶ ಮಾಡ್ತೀವಿ: ಸರ್ಕಾರದ ಸಾಧನೆಗಳನ್ನು ಜನರಿಗೆ ಸಾರಲು ಸಾಧನಾ ಸಮಾವೇಶ ಮಾಡುತ್ತೇವೆ. ದೊಡ್ಡಬಳ್ಳಾಪುರದಲ್ಲಿ ಕಾರ್ಯಕ್ರಮ ಆಯೋಜನೆ‌ ಮಾಡಿದ್ದೆವು. ಆದ್ರೆ ಪ್ರವೀಣ್ ನೆಟ್ಟಾರು ಹತ್ಯೆಯಾಗಿದ್ದರಿಂದ ಕಾರ್ಯಕ್ರಮ ರದ್ದು ಮಾಡಬೇಕಾಯಿತು. ದಾವಣಗೆರೆಯಲ್ಲಿ ಸಾಧನಾ ಸಮಾವೇಶ ಮಾಡಲು ನಳಿನ್ ಕುಮಾರ್ ಕಟೀಲ್ ಹಾಗೂ ಸಿಎಂ ಬೊಮ್ಮಾಯಿಯವರಿಗೆ ಮನವಿ ಮಾಡಿದ್ದೇವೆ. ಅವರು ಆಲೋಚನೆ‌ ಮಾಡುತ್ತೇವೆಂದು ಹೇಳಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ:ಮಳೆಯಿಂದ ಬೆಳೆ ಹಾನಿಯಾದ ಜಮೀನುಗಳಿಗೆ ಭೇಟಿ ನೀಡಿದ ಎಂ.ಪಿ.ರೇಣುಕಾಚಾರ್ಯ

ABOUT THE AUTHOR

...view details