ದಾವಣಗೆರೆ:ಜಾತಿ ಎತ್ತಿಕಟ್ಟಿದವರರು, ಜಾತಿ ಒಡೆಯಲು ಪ್ರಯತ್ನಿಸಿದವರು ಚುನಾವಣೆಯಲ್ಲಿ ನೆಗೆದು ಬಿದ್ದು ಹೋದರು. ಎಲ್ಲ ಜಾತಿ ಧರ್ಮವನ್ನು ಸ್ವಾಮಿಯವರು ಕಾಪಾಡುತ್ತಾರೆ. ನಾನು ಲಿಂಗಾಯಿತ ಅಲ್ಲ, ವೀರಶೈವನೂ ಅಲ್ಲ, ಕುರುಬ ಅಲ್ಲವೇ ಅಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ, ಸಚಿವ ಕೆ.ಎಸ್.ಈಶ್ವರಪ್ಪ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ರು.
ಜಾತಿ ಒಡೆಯಲು ಪ್ರಯತ್ನಿಸಿದವರು ಚುನಾವಣೆಯಲ್ಲಿ ನೆಗೆದು ಬಿದ್ದರು..ಈಶ್ವರಪ್ಪ ವಾಗ್ದಾಳಿ ದಾವಣಗೆರೆಯಲ್ಲಿ ನಡೆದ 7ನೇ ದಿನದ ದಸರಾ ಧರ್ಮ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜಾತಿ ಎತ್ತಿಕಟ್ಟುವವರು ಮನುಷ್ಯರಲ್ಲ. ಜಾತಿ ವಿಚಾರ ಎತ್ತಿಕಟ್ಟಿದರೆ ಆ ಜಾತಿಯವರೆಲ್ಲಾ ವೋಟು ಕೊಡುತ್ತಾರೆ ಅಂದುಕೊಂಡಿದ್ದಾರೆ. ಜಾತಿ ಒಡೆಯಲು ಪ್ರಯತ್ನಿಸಿದವರು ಚುನಾವಣೆಯಲ್ಲಿ ನೆಗೆದು ಬಿದ್ದು ಹೋದರು. ಈಗ ತಪ್ಪು ಮಾಡಿದ್ದೇವೆ ಎಂದು ಪಶ್ಚಾತ್ತಾಪದ ಮಾತನಾಡುತ್ತಿದ್ದಾರೆ. ಅವರಿಗೆ ಜಗದ್ಗುರುಗಳು ಬೇರೆ ಮಾಡಬೇಡಿ ಎಂದು ಹೇಳಿದ್ರು. ಆದರೂ ಕೇಳಲಿಲ್ಲ. ಇಂತಹ ಧರ್ಮ ಒಡೆಯುವಂತ, ಬೆಂಕಿ ಹಚ್ಚುವಂತ ಜನರನ್ನು ದೂರವಿಡಬೇಕು ಎಂದು ವಾಗ್ದಾಳಿ ನಡೆಸಿದರು.
ಅಡ್ಡ ಪಲ್ಲಕ್ಕಿಗೆ ವಿರೋಧಿಸಿದವರು ಸ್ವಾಮೀಜಿ, ಶಾಪ ಕೊಡುತ್ತೇನೆ ಎಂದ ಮೇಲೆ ಬಗ್ಗಿದರು
ಅಡ್ಡಪಲ್ಲಕ್ಕಿ ಉತ್ಸವವನ್ನು ಸಮರ್ಥಿಸಿಕೊಂಡ ಈಶ್ವರಪ್ಪ, ನಿನಗೆ ಇಷ್ಟ ಇಲ್ಲಾ ಅಂದ್ರೆ ಬೆತ್ತಲೆ ಹೋಗಪ್ಪ. ನಮ್ಮ ಆಚಾರ ನಮ್ಮ ಇಷ್ಟ ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ತಿವಿದಿದ್ದಾರೆ. ಅಂದಿನ ಸರ್ಕಾರ ಅಡ್ಡಪಲ್ಲಕ್ಕಿಗೆ ವಿರೋಧ ವ್ಯಕ್ತಪಡಿಸಿತ್ತು. ಆಗ ಅಡ್ಡಪಲ್ಲಕ್ಕಿ ಪರ್ಮಿಷನ್ ಕೊಡಲಿಲ್ಲ ಎಂದು ಸ್ವಾಮೀಜಿಯವರು ಸಿಎಂ ಮನೆ ಮುಂದೆ ಧರಣಿ ನಡೆಸಿ,ಶಾಪ ಕೊಡುತ್ತೇನೆ ಎಂದ ಮೇಲೆ ಪರ್ಮಿಷನ್ ಕೊಟ್ಟರು ಎಂದು ವಾಗ್ದಾಳಿ ನಡೆಸಿದರು.
ಸ್ವಾಮೀಜಿಗಳು ನೀವೇನು ಹನಿಮೂನ್ ಮಾಡಲ್ಲ
ಇನ್ನು, ದಸರಾ ಧರ್ಮ ಸಮ್ಮೇಳನವನ್ನು ಶಿವಮೊಗ್ಗದಲ್ಲಿ ಆಯೋಜನೆ ಮಾಡಿ ಬಹಳ ವರ್ಷಗಳೇ ಕಳೆದವು. ಮತ್ತೆ ಕಾರ್ಯಕ್ರಮ ಆಯೋಜನೆ ಮಾಡಬೇಕು. ಯಾಕೆ ನಮ್ಮ ಮೇಲೆ ಸ್ವಾಮೀಜಿಗಳಿಗೆ ಏನಾದ್ರು ಕೋಪಾನಾ ಎನ್ನುವುದು ಗೊತ್ತಾಗುತ್ತಿಲ್ಲ. ಶ್ರೀಗಳು ರಾಜ್ಯವನ್ನು ಸುತ್ತಾಡಬೇಕು. ಅದು ಬಿಟ್ಟು ನೀವೇನು ಮದುವೆ ಮಾಡಿಕೊಂಡಿಲ್ಲ. ಹನಿಮೂನ್ಗೆ ಹೋಗಲ್ಲ. ಹೀಗಾಗಿ ಧರ್ಮ ಜಾಗೃತಿ ಮಾಡಬೇಕು ಎಂದು ರಂಭಾಪುರಿ ಜಗದ್ಗುರಗಳ ಸಮ್ಮುಖದಲ್ಲಿಯೇ ವಿವಾದದ ಮಾತುಗಳನ್ನಾಡಿ ನಂತರ ತಪ್ಪಿದ್ದರೆ ಕ್ಷಮಿಸಿ ಎಂದು ಕ್ಷಮೆ ಕೋರಿದರು.