ದಾವಣಗೆರೆ :ಕುರುಬ ಸಮುದಾಯದ ಹೋರಾಟಕ್ಕೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬರಲ್ಲ ಅಂದ್ರೆ ನಾವೇನು ಮಾಡುವುದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಎಸ್ಟಿ ಹೋರಾಟಕ್ಕೂ ಆರ್ಎಸ್ಎಸ್ಗೂ ಏನೂ ಸಂಬಂಧ ಇಲ್ಲ. ಆದ್ರೆ, ನಾವು ಮಾಡುವ ಪ್ರಯತ್ನ ಮಾಡುತ್ತೇವೆ. ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸುವುದು ಸಿಎಂ ಹಾಗೂ ಪ್ರಧಾನ ಮಂತ್ರಿಗಳಿಗೆ ಬಿಟ್ಟ ವಿಚಾರ. ಇದರಲ್ಲಿ ಹೋರಾಟಕ್ಕೆ ಕರೆಯುವ, ಬಿಡುವ ಪ್ರಶ್ನೆಯೇ ಇಲ್ಲಾ ಎಂದರು.
ಮುಖ್ಯಮಂತ್ರಿಗಳು ರಾಜ್ಯದ ಮರಾಠ ಜನಾಂಗಕ್ಕೆ ಮಾಡಿದ ನಿಗಮದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮರಾಠಿಗರು ನಿನ್ನೆ-ಮೊನ್ನೆ ಬಂದಿಲ್ಲ. ಅನಾದಿಕಾಲದಿಂದಲೂ ಇಲ್ಲೇ ಇದ್ದು, ಇದು ಭಾಷೆಗೆ ನಿಗಮ ಮಾಡಿಲ್ಲ, ಜನಾಂಗಕ್ಕೆ ನಿಗಮ ಮಾಡಲಾಗಿದೆ. ನಿಗಮವನ್ನು ಬೆಳಗಾವಿ ಪ್ರಕರಣಗಳನ್ನು ಇಟ್ಟುಕೊಂಡು ವಿರೋಧ ಮಾಡೋದು ಅಷ್ಟೊಂದು ಸಮಂಜಸವಲ್ಲ ಎಂದು ಬೇಸರ ವ್ಯಕ್ತಪಡಿಸಿದರು.