ಕರ್ನಾಟಕ

karnataka

ETV Bharat / state

50 ಕೋಟಿ ಆಫರ್, ಕಾಂಗ್ರೆಸ್ ಶಾಸಕರ ಖರೀದಿ ಯತ್ನದ ವಿಡಿಯೋ ದಾಖಲೆ ಇವೆ: ಶಾಸಕ ರವಿಕುಮಾರ್ ಗಣಿಗ ಸ್ಪೋಟಕ ಹೇಳಿಕೆ

ಕಾಂಗ್ರೆಸ್​ ಶಾಸಕರಿಗೆ ಆಮಿಷವೊಡ್ಡಿ ಖರೀದಿಸುವ ಯತ್ನ ನಡೆಸಿರುವ ಬಗ್ಗೆ ದಾಖಲೆ ಇವೆ ಎಂದು ಮಂಡ್ಯ ಶಾಸಕ ರವಿಕುಮಾರ್​ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಶಾಸಕ ರವಿಕುಮಾರ್ ಗಣಗ
ಶಾಸಕ ರವಿಕುಮಾರ್ ಗಣಿಗ ಸ್ಪೋಟಕ ಹೇಳಿಕೆ

By ETV Bharat Karnataka Team

Published : Oct 27, 2023, 11:21 AM IST

Updated : Oct 27, 2023, 5:38 PM IST

ಶಾಸಕ ರವಿಕುಮಾರ್ ಗಣಿಗ ಸ್ಪೋಟಕ ಹೇಳಿಕೆ

ದಾವಣಗೆರೆ: ಯಾರು ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ತೆಗೆದಿದ್ದಾರೋ ಆ ಟೀಂ ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡಲು ಮನೆ ಮನೆಗೆ ಹುಡುಕಿಕೊಂಡು ಹೋಗ್ತಿದ್ದಾರೆ. ಅವರು ಹಣದ ಆಮಿಷದ ಜೊತೆಗೆ, ಮಂತ್ರಿಗಿರಿ ಕೊಡ್ತಿವಿ ಎಂದು ಹೇಳಿರುವ ಮಾಹಿತಿ ಹಾಗೂ ವಿಡಿಯೋ ನಮ್ಮ ಬಳಿ ಇದೆ. ಸದ್ಯದಲ್ಲೇ ಅದನ್ನು ಬಿಡುಗಡೆ ಮಾಡುತ್ತೇವೆ ಎಂದು ಮಂಡ್ಯ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಸ್ಪೋಟಕ ಹೇಳಿಕೆ ನೀಡಿದರು.

ನಗರದಲ್ಲಿ ಮಾತನಾಡಿದ ಅವರು, ’’ನಮ್ಮ ಶಾಸಕರನ್ನು ಬನ್ನಿ ದೆಹಲಿಗೆ ವಿಶೇಷ ವಿಮಾನ ಮಾಡುತ್ತೇವೆ, ಅಮಿತ್​ ಶಾ ಅವರನ್ನು ಭೇಟಿ ಮಾಡಿಸುತ್ತೇವೆ, ನಮ್ಮ ಬಳಿ ಸಾಕಷ್ಟು ಶಾಸಕರಿದ್ದಾರೆ ಎಂದು ಹೇಳಿಕೊಂಡು ಒಂದು ಗ್ಯಾಂಗ್ ಓಡಾಡುತ್ತಿದೆ. ನಮ್ಮ ನಾಲ್ಕು ಜನ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಿದ್ದಾರೆ. ಆ ಗ್ಯಾಂಗ್​ನಲ್ಲಿ ಒಬ್ಬರು ಬಿಎಸ್ ಯಡಿಯೂರಪ್ಪ ಅವರ ಪಿಎ ಆಗಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ’’.

ಸಿಎಂ, ಡಿಸಿಎಂ ಗಮನಕ್ಕೆ: ’’ಈ ಬಗ್ಗೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ಗಮನಕ್ಕೆ ತಂದಿದ್ದೇವೆ. ನಮ್ಮ ಶಾಸಕ ಮಿತ್ರರನ್ನು ಟಾರ್ಗೆಟ್ ಮಾಡಿದ್ದಾರೆ‌. ಅವರಿಗೆ ಬೆಳಗ್ಗೆ ಎದ್ದರೆ ಕೆಲಸ ಇರುವುದಿಲ್ಲ, ಆ ಗ್ಯಾಂಗ್​ನಲ್ಲಿ ಮೈಸೂರು ಭಾಗದವರು ಒಬ್ಬರಿದ್ದಾರೆ. ಬೆಳಗಾವಿ ಕಡೆಯವರು ಒಬ್ಬರಿದ್ದಾರೆ. ನಮ್ಮ ಸರ್ಕಾರ ತೆಗೆಯಬೇಕೆಂದು ಹೇಳಿಕೊಂಡು ಓಡಾಡ್ತಿದ್ದಾರೆ. ಈ ರೀತಿ ಮಾಡುವುದು ಸರಿಯಲ್ಲ ಪ್ರಜಾಪ್ರಭುತ್ವಕ್ಕೆ ಹಾನಿಕಾರಕವಾಗಿದೆ. ಶಾಸಕರಿಗೆ ಐವತ್ತು ಕೋಟಿ ಜೊತೆಗೆ ಮಂತ್ರಿಗಿರಿ ಆಫರ್ ಮಾಡ್ತಿದ್ದಾರೆ‘‘ ಎಂದು ವಾಗ್ದಾಳಿ ನಡೆಸಿದರು.

ಬೆಳಗಾವಿ ಮೂಲದವರು ಒಬ್ಬರು ಶಾಸಕರ ಖರೀದಿಗೆ ಪ್ರಯತ್ನ ನಡೆಸಿದ ಬಗ್ಗೆ ನಮ್ಮ ಶಾಸಕರು ಇಂಚಿಂಚು ಮಾಹಿತಿ ಕೊಟ್ಟಿದ್ದಾರೆ. ಈ ಆಪರೇಷನ್ ನಾಲ್ಕು ದಿಕ್ಕುಗಳಿಂದ ಮಾಡ್ತಿದ್ದು, ಮೈಸೂರು, ಬೆಳಗಾವಿ, ಅರಸಿಕೆರೆ ಹೀಗೆ ಸಾಕಷ್ಟು ಕಡೆ ಆ ಗ್ಯಾಂಗ್ ಆಪರೇಷನ್ ಮಾಡಲು ಪ್ರಯತ್ನಿಸುತ್ತಿದೆ‌. ಇದು ಸರ್ಕಾರ ಅಸ್ಥಿರ ಮಾಡುವುದಲ್ಲ ಶಾಸಕರನ್ನು ಖರೀದಿ ಮಾಡುವ ಯತ್ನ ನಡೆಯುತ್ತಿದೆ. ಆದರೇ ಅದು ವಿಫಲ ಆಗಲಿದೆ ಎಂದರು.

ಬಿಜೆಪಿ ಶಾಸಕರೂ ಕೂಡ ಕಾಂಗ್ರೆಸ್​ಗೆ ಬರುತ್ತಿದ್ದಾರೆ ಅವರಿಗೆ​ ಆಮಿಷವೊಡ್ಡಲಾಗಿದೆಯಾ ಎಂಬ ಮಾಧ್ಯಮದವರ ಇನ್ನೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾವು ಯಾರಿಗೂ ಆಮಿಷವೊಡ್ಡಿಲ್ಲ. ಸ್ವತಃ ಅವರೇ ಪಕ್ಷದ ಅಭಿವೃದ್ಧಿ ನೋಡಿ ನಮ್ಮ ಬಳಿ ಬರುತ್ತೇವೆ ಎನ್ನುತ್ತಿದ್ದಾರೆ. ನಮ್ಮ ಬಳಿ ಈಗಾಗಲೇ 136 ಜನ ಶಾಸಕರಿದ್ದಾರೆ. ನಾವು ಯಾರನ್ನೂ ಪಕ್ಷಕ್ಕೆ ಕರೆಯುತ್ತಿಲ್ಲ ಎಂದು ಹೇಳಿದರು.

ಎರಡೂವರೆ ವರ್ಷದ ಬಳಿಕ ಡಿಕೆಶಿ ಸಿಎಂ ಆಗ್ತಾರೆ:ಬಳಿಕ ಡಿಕೆ ಶಿವಕುಮಾರ್ ಸಿಎಂ ಆಗುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಡಿಸಿಎಂ ಡಿಕೆ ಶಿವಕುಮಾರ್​ ಅವರು ಸಿಎಂ ಆಗುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ. ಎರಡೂವರೆ ವರ್ಷದ ಬಳಿಕ ಅವರು ಸಿಎಂ ಆಗುವುದು ಗ್ಯಾರಂಟಿ. ಅದರಲ್ಲಿ ಎರಡು ಮಾತಿಲ್ಲ, ಅವರು ಕೂಡ ಪಕ್ಷಕ್ಕೆ ಸಾಕಷ್ಟು ದುಡಿದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಕೂಡ ಒಳ್ಳೆ ಕೆಲಸ ಮಾಡ್ತಿದ್ದಾರೆ, ಐದು ಗ್ಯಾರಂಟಿಗಳನ್ನು ಕೊಟ್ಟಿದ್ದಾರೆ ಎಂದು ಹೇಳಿದರು. ಹುಲಿ ಉಗುರು ಡಾಲರ್​ ಧಾರಣೆ ವಿಚಾರದಲ್ಲಿ, ಸಂತೋಷ್ ಹಾಗೆ ಉಳಿದ ತಪ್ಪಿತಸ್ಥರಿಗೂ ಬಂಧಿಸಬೇಕು ಎಂದು ಹೇಳಿದರು.

ಶಾಸಕ ಬಸವರಾಜ್ ವಿ ಶಿವಗಂಗಾ ಹೇಳಿಕೆ

ಶಾಸಕ ಬಸವರಾಜ್ ವಿ ಶಿವಗಂಗಾ ವಾಗ್ದಾಳಿ:ಬಿಜೆಪಿ ಎಂದಿಗೂ ಮುಂದಿನ ಬಾಗಿಲಿನಿಂದ ಬಂದು ರಾಜಕೀಯ ಮಾಡಿಲ್ಲ ಹಿಂಬಾಗಿಲಿನಿಂದಲೇ ಬಂದು ರಾಜಕೀಯ ಮಾಡಿದೆ ಎಂದು ಶಾಸಕ ಬಸವರಾಜ್ ವಿ ಶಿವಗಂಗಾ ವಾಗ್ದಾಳಿ ನಡೆಸಿದರು. ಅವರದ್ದು, ಯಾವಾಗಲೂ ಆಪರೇಷನ್ ಕಮಲ, ಹಣ, ಅಧಿಕಾರ ವ್ಯಾಮೋಹಕ್ಕಾಗಿ ಬರುತ್ತಾರೆಯೇ ವಿನಃ ಜನಪರವಾಗಿ ಕೆಲಸ ಮಾಡ್ಬೇಕೆಂದು ಅವರು ಅಧಿಕಾರಕ್ಕೆ ಬಂದಿಲ್ಲ ಎಂದು ಆರೋಪಿಸಿದರು.

ಇದನ್ನೂ ಓದಿ:ಕಲಬುರಗಿಯಲ್ಲಿ ಎರಡು ವರ್ಷಗಳಿಂದ ದಿಶಾ ಮೀಟಿಂಗ್ ಆಗಿಲ್ಲ: ಉಮೇಶ್​ ಜಾಧವ್​

Last Updated : Oct 27, 2023, 5:38 PM IST

ABOUT THE AUTHOR

...view details