ದಾವಣಗೆರೆ: ಜಿಲ್ಲೆಯ ಚನ್ನಗಿರಿ ಭಾಗದಲ್ಲಿ ಚಿರತೆ ಕಾಟ ಹೆಚ್ಚಾಗುತ್ತಿದೆ. ಇದೀಗ ಶುಕ್ರವಾರ ರಾತ್ರಿ ಆಹಾರ ಅರಸಿ ನಾಡಿಗೆ ಬಂದ ಚಿರತೆಯೊಂದು ನಾಯಿಯನ್ನು ಕೊಂದು ಹಾಕಿದೆ. ಈ ಘಟನೆ ಜನರಲ್ಲಿ ಆತಂಕ ಸೃಷ್ಟಿಸಿದೆ.
ಚನ್ನಗಿರಿ ತಾಲೂಕಿನ ನಾರಶೆಟ್ಟಿಹಳ್ಳಿಯಲ್ಲಿ ಚಿರತೆ ರಾತ್ರಿ 1:30ರ ಸಮಾರಿಗೆ ಮಂಜುನಾಥ್ ಎಂಬುವವರ ಮನೆಯ ಕಾಂಪೌಂಡ್ ಹಾರಿ ನಾಯಿಯನ್ನು ಕಚ್ಚಿ ಕೊಂದಿದೆ. ಇದನ್ನು ಗಮನಿಸಿ ಮನೆಯವರು ಕೂಗಿದ ತಕ್ಷಣ ಅಲ್ಲಿಂದ ಚಿರತೆ ಕಾಲ್ಕಿತ್ತಿದೆ. ಆದರೆ, ಬೆಳಗಿನ ಜಾವ 4 ಗಂಟೆಗೆ ಮತ್ತೆ ಮನೆಯ ಕಾಂಪೌಂಡ್ಗೆ ನುಗ್ಗಿ ಸತ್ತಿದ್ದ ನಾಯಿಯನ್ನು ಎತ್ತಿಕೊಂಡು ಹೋಗಿದೆ. ಇದರ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.