ಕರ್ನಾಟಕ

karnataka

ETV Bharat / state

ಶವಸಂಸ್ಕಾರಕ್ಕೆ ಅಡ್ಡಿ ಮಾಡಿದ್ರೆ ಕಾನೂನು ಕ್ರಮ: ಜಿಲ್ಲಾ ವಕ್ಪ್ ಮಂಡಳಿ ಎಚ್ಚರಿಕೆ - ದಾವಣಗೆರೆ ಮುಸ್ಲಿಂ ಅಂತ್ಯಕ್ರಿಯೆ

ಕೊರೊನಾದಿಂದ ಮೃತಪಟ್ಟ ಮುಸ್ಲಿಂ ಸಮುದಾಯದ ಜನರಿಗೆ ಖಬರಸ್ಥಾನಗಳಲ್ಲಿ ಶವ ಸಂಸ್ಕಾರಕ್ಕೆ ಅವಕಾಶ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಅಂತ್ಯಸಂಸ್ಕಾರ ಪ್ರತಿಯೊಬ್ಬ ಮೃತ ವ್ಯಕ್ತಿಯ ಹಕ್ಕು. ಇದಕ್ಕೆ ಯಾರಿಂದಲಾದರೂ ಅಡ್ಡಿಯುಂಟಾದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ವಕ್ಪ್ ಮಂಡಳಿ ಎಚ್ಚರಿಕೆ ನೀಡಿದೆ.

Representative Image
ಸಾಂಧರ್ಬಿಕ ಚಿತ್ರ

By

Published : Jul 21, 2020, 11:39 PM IST

ದಾವಣಗೆರೆ:ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟ ಮುಸ್ಲಿಂ ಸಮುದಾಯದವರ ಶವ ಸಂಸ್ಕಾರಕ್ಕೆ ಖಬರಸ್ಥಾನಗಳಲ್ಲಿ ಅಡ್ಡಿಪಡಿಸುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ವಕ್ಪ್ ಮಂಡಳಿ ಎಚ್ಚರಿಸಿದೆ.

ರಾಜ್ಯದ ಹಲವೆಡೆ ಕೋವಿಡ್-19 ಸೋಂಕಿನಿಂದ ಸಾವಿಗೀಡಾದ ಮುಸ್ಲಿಂ ಬಾಂಧವರ ಶವಸಂಸ್ಕಾರಕ್ಕೆ ಖಬರಸ್ತಾನದಲ್ಲಿ ಸ್ಥಳ ನೀಡಲು ನಿರಾಕರಿಸುತ್ತಿರುವ ಮತ್ತು ಅನಗತ್ಯ ಕಿರುಕುಳ ನೀಡುತ್ತಿರುವ ವರದಿಗಳು ಬಂದಿವೆ. ಘನತೆಪೂರ್ಣ ಅಂತ್ಯಸಂಸ್ಕಾರ ಪ್ರತಿಯೊಬ್ಬ ಮೃತ ವ್ಯಕ್ತಿಯ ಹಕ್ಕು. ಈ ಹಕ್ಕಿಗೆ ಚ್ಯುತಿಯನ್ನುಂಟು ಮಾಡಲು ಯಾರಿಗೂ ಅವಕಾಶವಿಲ್ಲ ಎಂದು ಜಿಲ್ಲಾ ವಕ್ಪ್ ಸಲಹಾ ಸಮಿತಿ ಅಧ್ಯಕ್ಷ ಮೊಹಮ್ಮದ್ ಸಿರಾಜ್ ತಿಳಿಸಿದ್ದಾರೆ.

ಇನ್ನು ಮುಂದೆ ಜಿಲ್ಲೆಯ ಮುಸ್ಲಿಂ ಬಾಂಧವರ ಶವಸಂಸ್ಕಾರಕ್ಕೆ ತೊಂದರೆ ಉಂಟು ಮಾಡುವ, ಸ್ಥಳ ನಿರಾಕರಿಸುವ, ಯಾವುದೇ ವ್ಯಕ್ತಿ ಅಥವಾ ವಕ್ಪ್ ಅಥವಾ ವಕ್ಪ್ ಸಂಸ್ಥೆಗಳ ವ್ಯವಸ್ಥಾಪನಾ ಸಮಿತಿ, ಆಡಳಿತಾಧಿಕಾರಿ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details