ದಾವಣಗೆರೆ: ಮನೆಗೆ ಸಿಡಿಲು ಬಡಿದ ಪರಿಣಾಮ ಬಾಲಕ ಗಾಯಗೊಂಡಿರುವ ಘಟನೆ ತಾಲೂಕಿನ ಲೋಕಿಕೆರೆಯಲ್ಲಿ ನಡೆದಿದೆ.
ಮನೆಗೆ ಸಿಡಿಲು ಬಡಿದು ಆತಂಕ... ಬಾಲಕನಿಗೆ ಗಾಯ - Lokikere
ಮನೆಗೆ ಸಿಡಿಲು ಬಡಿದ ಪರಿಣಾಮ ಬಾಲಕನೋರ್ವ ಗಾಯಗೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ಮನೆಗೆ ಸಿಲುಡಿ ಬಡಿತ
ಇಂದು ಬೆಳಗಿನಜಾವ 5 ಗಂಟೆ ಸುಮಾರಿಗೆ ಗ್ರಾಮದ ಮಹಾಂತೇಶ್ ಎಂಬುವರ ಮನೆಗೆ ಸಿಡಿಲು ಬಡಿದಿದೆ. ಸಿಡಿಲಿನ ಶಬ್ದಕ್ಕೆ ಮಲಗಿದ್ದ ಕುಟುಂಬಸ್ಥರು ಬೆಚ್ಚಿ ಬಿದ್ದಿದ್ದಾರೆ. ಘಟನೆಯಲ್ಲಿ ಜೀವನ್(8) ಎಂಬ ಬಾಲಕ ಗಾಯಗೊಂಡಿದ್ದು, ಅದೃಷ್ಟವಶಾತ್ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಿಡಿಲಿನ ಅಬ್ಬರಕ್ಕೆ ಗೋಡೆ ಬಿರುಕುಗೊಂಡಿದ್ದು, ಟಿವಿ, ಫ್ರಿಡ್ಜು ಸುಟ್ಟಿವೆ. ಸ್ಥಳಕ್ಕೆ ಕಂದಾಯ ಅಧಿಕಾರಿ ಕೆಂಚೇಗೌಡ ಹಾಗೂ ಬೆಸ್ಕಾಂ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.