ಕರ್ನಾಟಕ

karnataka

ETV Bharat / state

ಐಎಂಎನಲ್ಲಿ ವಿಧವೆ ಹಣಕ್ಕೂ ಕುತ್ತು: ಕಣ್ಣೀರು ಹಾಕಿದ ಮಹಿಳೆ - etv bharat

ಐಎಂಎ ಜ್ಯುವೆಲ್ಲರ್ಸ್ ಹೂಡಿಕೆಯ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆಯಾಗಿದೆ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ನಡುವೆ ಹಣ ಕಳೆದುಕೊಂಡ ಸಾವಿರಾರು ಜನರು ತಮ್ಮ ನೋವು ತೋಡಿಕೊಳ್ಳುತ್ತಿದ್ದಾರೆ.

ಹೂಡಿಕೆಯ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚಿಸಿರುವ ಐಎಂಎ ಜ್ಯುವೆಲ್ಲರ್ಸ್ ಕಚೇರಿ ಮುಂದೆ ಜಮಾಯಿಸಿದ ಸಾರ್ವಜನಿಕರು

By

Published : Jun 11, 2019, 7:59 PM IST

ದಾವಣಗೆರೆ: ಹೂಡಿಕೆಯ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚಿಸಿರುವ ಐಎಂಎ ಜ್ಯುವೆಲ್ಲರ್ಸ್ ಬೆಂಗಳೂರು, ಮೈಸೂರು ಅಲ್ಲದೇ ದಾವಣಗೆರೆಯಲ್ಲಿಯೂ ಸಹ ಹೆಚ್ಚಿನ ಜನರು ಹಣ ಹೂಡಿಕೆ‌ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದೀಗ ಹಣ ಕಳೆದುಕೊಂಡವರು ಮಾಧ್ಯಮಗಳ ಮುಂದೆ ಗಳಗಳನೇ ಕಣ್ಣೀರು ಹಾಕುತ್ತಿದ್ದಾರೆ.

ಹೌದು, ದಾವಣಗೆರೆಯಲ್ಲಿಯೂ ಸಾವಿರಾರು ಮಂದಿ ಐಎಂಎನಲ್ಲಿ‌ ಹಣ ಹೂಡಿಕೆ ಮಾಡಿದ್ದು, ಜ್ಯುವೆಲ್ಲರ್ಸ್ ಮಾಲೀಕನ ನಾಪತ್ತೆಯಿಂದ ಕಂಗಾಲಾಗಿದ್ದಾರೆ. ಈ‌ ಹಿನ್ನೆಲೆ‌ ಹಣ ಹೂಡಿಕೆ ಮಾಡಿದವರು ನಿನ್ನೆಯಿಂದಲೇ ನಗರದ ಐಎಂಎ ಕಚೇರಿ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಚೇರಿ ಬಳಿ ಜಮಾಯಿಸಿರುವ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆ. ಇನ್ನು ಕೆಲವರು ಗಾಂಧಿ ನಗರ, ಅಜಾದ್ ನಗರ ಇನ್ನಿತರೆಡೆ ದೂರು ದಾಖಲಿಸಲು ತೆರಳಿದ್ದಾರೆ ಎಂಬ ಮಾಹಿತಿ ಬಂದಿದೆ.

ಗಂಡ ಇಲ್ಲ ಎಂದು ಹಣ ಕೂಡಿಟ್ಟಿದ್ದೆ..!

ಪತಿಯನ್ನು ಕಳೆದುಕೊಂಡ ಮಹಿಳೆವೋರ್ವಳು ನಾಲ್ಕು ಲಕ್ಷ ರೂಪಾಯಿ ಹಣವನ್ನು ಐಎಂಎನಲ್ಲಿ ಹೂಡಿಕೆ ಮಾಡಿರುವುದಾಗಿ ತಿಳಿಸಿದ್ದಾಳೆ. ನನಗೆ ಮುಂದೆ ಸಹಾಯವಾಗಬಹುದು ಎಂದು ತಿಳಿದು ಇಲ್ಲಿ ಹಣ ಹೂಡಿದ್ದೆ. ನಮ್ಮ ಸಮುದಾಯದವರೇ ಆಗಿದ್ದರಿಂದ ಜಾಸ್ತಿ‌ ನಂಬಿಕೆ ಇತ್ತು. ಆದರೆ, ಇದೀಗ ಮೋಸ ಮಾಡಿದ್ದಾರೆ. ಮಕ್ಕಳ ಶಾಲಾ ಶುಲ್ಕ ಕಟ್ಟಲು ಹಣ ಇಲ್ಲ, ಜೀವನ ಸಾಗಿಸೋದು ಹೇಗೆ ಅನ್ನೋದು ತಿಳಿಯುತ್ತಿಲ್ಲ ಎಂದು ಮೋಸ ಹೋದ ಮಹಿಳೆ ಸಬೀನಾ ಮಾಧ್ಯಮದವರ ಮುಂದೆ ಕಣ್ಣೀರು ಸುರಿಸಿದ್ದಾಳೆ.

ಹೂಡಿಕೆಯ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚಿಸಿರುವ ಐಎಂಎ ಜ್ಯುವೆಲ್ಲರ್ಸ್ ಕಚೇರಿ ಮುಂದೆ ಜಮಾಯಿಸಿದ ಸಾರ್ವಜನಿಕರು

ಇತ್ತ ವಂಚನೆಗೆ ಒಳಗಾದವರಿಂದ ದೂರು ಸ್ವೀಕರಿಸುತ್ತೇವೆ. ಆದರೆ, ಇದುವರೆಗೂ ಯಾವುದೇ ದೂರುಗಳು ದಾಖಲಾಗಿಲ್ಲ. ವಂಚನೆಗೆ ಒಳಗಾದವರು ಯಾವುದೇ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಬಹುದು. ದಾವಣಗೆರೆಯಲ್ಲಿರುವ ಸ್ಥಳೀಯ ಐಎಂಎ ಕಚೇರಿಯನ್ನು ಪರಿಶೀಲನೆ‌ ನಡೆಸುತ್ತೇವೆ ಎಂದು ಎಎಸ್ಪಿ ಉದೇಶ್ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details