ದಾವಣಗೆರೆ:ಮಂಗಳವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದ ನಗರದ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಶಂಕರ್ ವಿಹಾರ್ ಲೇಔಟ್, ಭರತ್ ಕಾಲೋನಿ ಸೇರಿದಂತೆ ಹಲವು ಬಡಾವಣೆಗಳಲ್ಲಿರುವ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ರಾತ್ರಿಯೆಲ್ಲ ಜಾಗರಣೆ ಮಾಡುವ ಪರಿಸ್ಥಿತಿ ಎದುರಾಗಿದೆ.
ದಾವಣಗೆರೆಯಲ್ಲಿ ಭಾರಿ ಮಳೆ: ಮನೆಗಳಿಗೆ ನೀರು ನುಗ್ಗಿ ಅವಾಂತರ - ದಾವಣಗೆರೆ ಮಳೆ ಸುದ್ದಿ
ದಾವಣಗೆರೆಯಲ್ಲಿ ಭಾರಿ ಮಳೆಯಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದ್ದು, ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ.
ಮನೆಗಳಲ್ಲಿರುವ ಸಾಮಗ್ರಿಗಳು ನೀರುಪಾಲಾಗಿದ್ದು, ಜನರು ತೊಂದರೆ ಅನುಭವಿಸುವಂತಾಗಿದೆ. ರಾಜಕಾಲುವೆಯಲ್ಲಿ ಸರಾಗವಾಗಿ ನೀರು ಹರಿಯದ ಕಾರಣ ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿನ ಫ್ರಿಡ್ಜ್, ಟೇಬಲ್ ಫ್ಯಾನ್, ಕೂಲರ್ ಸೇರಿದಂತೆ ಎಲೆಕ್ಟ್ರಿಕಲ್ ವಸ್ತುಗಳು ಮಳೆ ನೀರಿನಿಂದ ಹಾನಿಗೊಳಗಾಗಿವೆ.
ಅಲ್ಲದೆ ಮಳೆಯಿಂದ ಆರ್ಎಂಸಿ ಲಿಂಕ್ ರೋಡ್ ಬಳಿ ರಾಜಕಾಲುವೆ ಮೂಲಕ ಹಂದಿಗಳ ಮೃತದೇಹಗಳು ರಸ್ತೆಗೆ ತೇಲಿಬಂದು ಸಂಚಾರಕ್ಕೆ ಅಡ್ಡಿಯುಂಟಾಗಿದ್ದು ಕಂಡುಬಂತು. ರಾಜಕಾಲುವೆಯ ಸಮರ್ಪಕ ನಿರ್ವಹಣೆ ಇಲ್ಲದೆ ಮಳೆ ನೀರು ರಸ್ತೆಗಳಲ್ಲಿ ಹರಿಯುತ್ತಿದೆ. ಸ್ಥಳೀಯ ಯುವಕರು ಹಂದಿಗಳನ್ನು ತೆರವುಗೊಳಿಸಿದ್ದಾರೆ.