ಕರ್ನಾಟಕ

karnataka

ETV Bharat / state

ನಾಳೆ ಮೊದಲನೇ ಹಂತದ ಗ್ರಾಪಂ ಚುನಾವಣೆ: ದಾವಣೆಗೆರೆಯಲ್ಲಿ ಸಕಲ ಸಿದ್ಧತೆ

ದಾವಣಗೆರೆಯ ಮೂರು ತಾಲೂಕುಗಳ ಗ್ರಾಪಂಗಳಿಗೆ ನಾಳೆ ಚುನಾವಣೆಗೆ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

Grama Panchayat Election at Davangere
ಬ್ಯಾಲೆಟ್​ ಬಾಕ್ಸ್​ನೊಂದಿಗೆ ಮತಗಟ್ಟೆಗಳತ್ತ ಹೆಜ್ಜೆ ಹಾಕಿದ ಚುನಾವಣಾ ಸಿಬ್ಬಂದಿ

By

Published : Dec 21, 2020, 9:35 PM IST

ದಾವಣಗೆರೆ: ಜಿಲ್ಲೆಯ ಆರು ತಾಲೂಕುಗಳ ಪೈಕಿ ಮೂರು ತಾಲೂಕಗಳಾದ ದಾವಣಗೆರೆ, ಜಗಳೂರು, ಹೊನ್ನಾಳಿಯ ಗ್ರಾಪಂಗಳಿಗೆ ನಾಳೆ ಮೊದಲನೇ‌ ಹಂತದ ಚುನಾವಣೆಗೆ ಮತದಾನ ನಡೆಯಲ್ಲಿದ್ದು, ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿವೆ.

ಇಂದು ನಗರದ ಮೋತಿ ವೀರಪ್ಪ ಕಾಲೇಜು ಆವರಣದಲ್ಲಿ ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಬ್ಯಾಲೆಟ್ ಪೇಪರ್ ಬಾಕ್ಸ್​ಗಳನ್ನು ನೀಡಲಾಯಿತು. ಮೂರು ತಾಲೂಕುಗಳ ಚುನಾವಣಾ ಕಾರ್ಯಕ್ಕೆ 80 ಕೆಎಸ್​ಆರ್​ಟಿಸಿ ಬಸ್​ಗಳು, 38 ಮಿನಿ‌ ಬಸ್ ಮತ್ತು 26 ಜೀಪ್​ಗಳ ವ್ಯವಸ್ಥೆ ಮಾಡಲಾಗಿದೆ. ದಾವಣಗೆರೆಗೆ 38, ಹೊನ್ನಾಳಿಗೆ 29, ಜಗಳೂರಿಗೆ 22 ಚುನಾವಣಾ ಅಧಿಕಾರಿಗಳನ್ನು ನೇಮಿಸಲಾಗಿದೆ. ಮೂರು ತಾಲೂಕುಗಳ ಒಟ್ಟು 88 ಗ್ರಾಪಂಗಳ 1,087 ಸ್ಥಾನಗಳಿಗೆ ನಾಳೆ ಮತದಾನ ನಡೆಯಲಿದ್ದು, ಒಟ್ಟು 579 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಬ್ಯಾಲೆಟ್​ ಬಾಕ್ಸ್​ನೊಂದಿಗೆ ಮತಗಟ್ಟೆಗಳತ್ತ ಹೆಜ್ಜೆ ಹಾಕಿದ ಚುನಾವಣಾ ಸಿಬ್ಬಂದಿ

ಇದನ್ನೂ ಓದಿ : ಚಿಕ್ಕೋಡಿ: ಗ್ರಾ.ಪಂ ಚುನಾವಣೆ ಅಂತಿಮ ಕಣದಲ್ಲಿ 1,628 ಅಭ್ಯರ್ಥಿಗಳು

ಮೊದಲ ಹಂತದ 88 ಗ್ರಾಪಂಗಳ ಮತದಾರರ ವಿವರ:

ದಾವಣಗೆರೆ:ಒಟ್ಟು ಮತದಾರರು 1,70,770, ಪುರುಷರು - 85,731, ಮಹಿಳೆಯರು - 85,039
ಹೊನ್ನಾಳಿ:ಒಟ್ಟು ಮತದಾರರು 99,085, ಪುರುಷರು - 49,992, ಮಹಿಳೆಯರು - 49,093
ಜಗಳೂರು: ಒಟ್ಟು ಮತದಾರರು 1,08,235, ಪುರುಷರು - 54,729, ಮಹಿಳೆಯರು - 53,506

ABOUT THE AUTHOR

...view details