ದಾವಣಗೆರೆ: ರೌಡಿಶೀಟರ್ ಗ್ಯಾಂಗ್ವೊಂದು ಇನ್ನೊಂದು ಗ್ಯಾಂಗ್ನ ರೌಡಿಶೀಟರ್ಗಳ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು ಅದರಲ್ಲಿ ಒಬ್ಬ ಸ್ಥಳದಲ್ಲೇ ಸಾವಿಗೀಡಾಗಿದ್ದರೆ ಇನ್ನೊಬ್ಬ ತೀವ್ರವಾಗಿ ಗಾಯಗೊಂಡಿರುವ ಘಟನೆ ಹೊನ್ನಾಳಿ ತಾಲೂಕಿನ ಚೀಲೂರು-ಗೋವಿನಕೋವಿ ಬಳಿ ನಡೆದಿದೆ. ಹಲ್ಲೆ ಮಾಡಿ ಪರಾರಿಯಾಗಿರುವ ಶಿವಮೊಗ್ಗದ ಕುಖ್ಯಾತ ರೌಡಿ ಶೀಟರ್ ಹಂದಿ ಅಣ್ಣಿ ಕೊಲೆ ಸಹಚರರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹಂದಿ ಅಣ್ಣಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಆರೋಪಿ ಆಂಜನಿ (30) ಸ್ಥಳದಲ್ಲೇ ಮೃತಪಟ್ಟರೆ, ಇನ್ನೊಬ್ಬ ಆರೋಪಿ ಮಧು (28) ತೀವ್ರವಾಗಿ ಗಾಯಗೊಂಡಿದ್ದು ಆತನನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿವಮೊಗ್ಗದ ಕುಖ್ಯಾತ ರೌಡಿ ಶೀಟರ್ ಹಂದಿ ಅಣ್ಣಿ ಕೊಲೆ ಪ್ರಕರಣದ ಭಾಗಿಯಾಗಿದ್ದ ಆರೋಪಿ ಆಂಜನಿ, ಮಧು ಕೆಲ ದಿನಗಳ ಹಿಂದಷ್ಟೇ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದರು. ದ್ವಿ ಚಕ್ರ ವಾಹನದಲ್ಲಿ ಹೊರಟಿದ್ದ ವೇಳೆ ಮಧು ಹಾಗೂ ಅಂಜನಿ ಮೇಲೆ ಇನ್ನೊಂದು ರೌಡಿಶೀಟರ್ ಗ್ಯಾಂಗ್ ಏಕಾಎಕಿ ದಾಳಿ ನಡೆಸಿ ಮಾರಕಾಸ್ತ್ರಗಳಿಂದ ತೀವ್ರ ಹಲ್ಲೆ ನಡೆಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ:ತಂದೆ ಸಾವು, ಮನನೊಂದ ಮಗ ಆತ್ಮಹತ್ಯೆಗೆ ಶರಣು.. ಕೌಟುಂಬಿಕ ಕಲಹಕ್ಕೆ ಒಂದೇ ದಿನ ಇಬ್ಬರು ಬಲಿ
ಸ್ಕಾರ್ಪಿಯೋದಲ್ಲಿ ಬಂದ ರೌಡಿಶೀಟರ್ ಗ್ಯಾಂಗ್:ಸ್ಕಾರ್ಪಿಯೋದಲ್ಲಿ ಬಂದಿ ರೌಡಿಶೀಟರ್ ಗ್ಯಾಂಗ್ವೂಂದು ಬೈಕ್ ಮೇಲೆ ಹೊರಟ್ಟಿದ್ದ ಆಂಜನಿ (30) ಮಧು ಮೇಲೆ ಮಾರಕಾಸ್ತ್ರಗಳಿಂದ ದಿಢೀರ್ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಹಲ್ಲೆ ಮಾಡಿದ ರೌಡಿಶೀಟರ್ ಗ್ಯಾಂಗ್ ಸ್ಕಾರ್ಪಿಯೋ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದು, ಆ ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ಘಟನಾ ಸ್ಥಳಕ್ಕಾಗಮಿಸಿದ ಹೊನ್ನಾಳಿ ನ್ಯಾಮತಿ ಪೊಲೀಸರು ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ. ಹಲ್ಲೆಗೊಳಗಾದ ಆಂಜನಿ ಮತ್ತು ಮಧು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ನಿವಾಸಿಗಳೆಂದು ಪೊಲೀಸ್ ಮೂಲಗಳು ತಿಳಿಸಿವೆ.