ದಾವಣಗೆರೆ:ದಾವಣಗೆರೆ ಹಾಗೂ ಚಿತ್ರದುರ್ಗ ಭಾಗದ ವಿದ್ಯಾರ್ಥಿಗಳ ಆಶೋತ್ತರಗಳನ್ನು ಈಡೇರಿಸಲು ಸ್ಥಾಪನೆಯಾಗಿದ್ದ ದಾವಣಗೆರೆ ವಿಶ್ವವಿದ್ಯಾಲಯದ 11ನೇ ವರ್ಷದ ಸಂಭ್ರಮವನ್ನು ಇಮ್ಮಡಿಗೊಳಿಸಲು ವಿಶ್ವವಿದ್ಯಾಲಯದಲ್ಲಿ ಸಂಸ್ಥಾಪನಾ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ದಾವಣಗೆರೆ ವಿವಿ ಇತಿಹಾಸ

ಅನೇಕ ಶಿಕ್ಷಣ ಪ್ರೇಮಿಗಳು ಹಾಗೂ ಹಿರಿಯರು ದಾವಣಗೆರೆಯಲ್ಲಿ ಸ್ನಾತಕೋತ್ತರ ಕೇಂದ್ರವನ್ನು ಆರಂಭಿಸಬೇಕೆಂದು ಹಲವಾರು ವರ್ಷಗಳಿಂದ ನಡೆಸಿದ ಸತತ ಪ್ರಯತ್ನದ ಫಲವಾಗಿ 1979 ಆಗಸ್ಟ್ ನಲ್ಲಿ ಮೈಸೂರು ವಿಶ್ವವಿದ್ಯಾಲಯ ವ್ಯಾಪ್ತಿಗೆ ದಾವಣಗೆರೆ ನಗರದ ಆರ್ ಎಲ್ ಕಾನೂನು ಕಾಲೇಜಿನಲ್ಲಿ ಸ್ನಾತಕೋತ್ತರ ವಿಭಾಗಗಳು ಪ್ರಾರಂಭವಾದವು. ನಂತರ 1987ರಲ್ಲಿ ಕುವೆಂಪು ವಿಶ್ವವಿದ್ಯಾಲಯ ಪ್ರಾರಂಭ ಆಗಿದ್ದರಿಂದ ದಾವಣಗೆರೆ ಕೇಂದ್ರಗಳು ವರ್ಗಾವಣೆಗೊಂಡವು.1988ರಿಂದ ಸ್ನಾತಕೋತ್ತರ ಕೇಂದ್ರ ದಾವಣಗೆರೆಯ ತೋಳಹುಣಸೆಯಲ್ಲಿ ಪ್ರಾರಂಭಗೊಂಡಿತು.
ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ ಜನತೆಯ ಆಗ್ರಹದ ಮೇರೆಗೆ ಹಾಗೂ ನನ್ನ ನೇತೃತ್ವದ ಹೋರಾಟದಿಂದ 2009, ಆಗಸ್ಟ್18 ರಂದು ತೋಳಹುಣಸೆಯಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ಪ್ರಾರಂಭಗೊಂಡಿತು. ದಾವಣಗೆರೆಯ ಸುತ್ತಮುತ್ತಲಿನ ಮಕ್ಕಳೂ ಕೂಡ ಪದವಿ ಪಡೆಯಬೇಕು. ಬರಗಾಲದ ಊರು ನಮ್ಮದು ಎಂದು ಯಡಿಯೂರಪ್ಪನವರಿಗೆ ಮನವರಿಕೆ ಮಾಡಿಕೊಟ್ಟ ನಂತರ ಬಿಎಸ್ವೈ ಅಂದು ಅಧಿಕೃತ ಮುದ್ರೆ ಒತ್ತಿದರು ಎಂದ ವಿವಿ ಹುಟ್ಟಿದ ಬಗ್ಗೆ ಹೋರಾಟಗಾರ ಎಂಎಸ್ಕೆ ಶಾಸ್ತ್ರಿ ವಿವರಿಸಿದರು.
ದಾವಣಗೆರೆ ವಿಶ್ವವಿದ್ಯಾಲಯದ 11 ನೇ ವರ್ಷದ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ಮುಖ್ಯ ಅತಿಥಿಗಳಾಗಿ ಆಗಮಿಸಿ, ಮಾತನಾಡಿದರು.