ದಾವಣಗೆರೆ: 2ನೇ ಮದುವೆ ವಿಷಯ ಮರೆಮಾಚಲು ಸ್ವಂತ ಮಗಳ ಉಸಿರನ್ನೇ ನಿಲ್ಲಿಸಿದ ಪಾಪಿ ತಂದೆ! - father killed daughter news
ಮೊದಲ ಹೆಂಡತಿಗೆ ತನ್ನ ಎರಡನೇ ಮದುವೆ ವಿಷಯ ತಿಳಿಯಬಾರದೆಂಬ ಕಾರಣಕ್ಕೆ ತಂದೆಯೊಬ್ಬ ತನ್ನ ಎರಡನೇ ಹೆಂಡತಿಯ 2 ವರ್ಷದ ಮಗಳನ್ನು ಕೊಲೆ ಮಾಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ತಂದೆಯಿಂದಲೇ ಮಗಳ ಹತ್ಯೆ
ದಾವಣಗೆರೆ:ಎರಡನೇ ಪತ್ನಿಯ ಎರಡು ವರ್ಷದ ಮಗುವನ್ನು ಕೊಲೆ ಮಾಡಿ ತಂದೆಯೇ ಹೂತು ಹಾಕಿರುವ ಅಮಾನವೀಯ ಘಟನೆ ಜಗಳೂರು ತಾಲೂಕಿನ ಗುತ್ತಿದುರ್ಗ ಗ್ರಾಮದಲ್ಲಿ ನಡೆದಿದೆ.
ಶಿರೀಷಾ ಹತ್ಯೆಯಾದ ಮಗು. ಗುತ್ತಿದುರ್ಗ ಗ್ರಾಮದ ನಿಂಗಪ್ಪ ಕೊಲೆ ಮಾಡಿದ ಆರೋಪಿ. ಮಗು ಹತ್ಯೆ ಹಾಗೂ ಅಪಹರಣ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.