ದಾವಣಗೆರೆ:ನಕಲಿ ಚಿನ್ನದ ನಾಣ್ಯಗಳನ್ನು ಮಾರಾಟ ಮಾಡಿ ಜನರನ್ನು ವಂಚಿಸುತ್ತಿದ್ದ ಮಹಾರಾಷ್ಟ್ರ ಮೂಲದ 3 ಜನ ಆರೋಪಿಗಳನ್ನು ಕೆಟಿಜೆ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಕಲಿ ಚಿನ್ನದ ನಾಣ್ಯ ನೀಡಿ ವಂಚಿಸುತ್ತಿದ್ದ ಖದೀಮರ ಹೆಡೆಮುರಿ ಕಟ್ಟಿದ ದಾವಣಗೆರೆ ಪೊಲೀಸರು
ನಕಲಿ ಚಿನ್ನದ ನಾಣ್ಯಗಳನ್ನು ಮಾರಾಟ ಮಾಡಿ ವಂಚಿಸುತ್ತಿದ್ದ ಖದೀಮರನ್ನು ದಾವಣಗೆರೆಯ ಕೆಟಿಜೆ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ:ಹೊನ್ನಾಳಿ ಪಟ್ಟಣದಲ್ಲಿರುವ ಬಟ್ಟೆ ಅಂಗಡಿ ಮಾಲೀಕ ನರಪತ್ ಸಿಂಗ್ ಶಾಪ್ಗೆ ಆಗಮಿಸಿದ ಖದೀಮರು,"ಪೈಪ್ಲೈನ್ ಕೆಲಸ ಮಾಡುವ ವೇಳೆ ಗಡಿಗೆಯಲ್ಲಿ ಒಂದು ಕೆಜಿ ಚಿನ್ನದ ಬಿಲ್ಲೆಗಳು ಸಿಕ್ಕಿವೆ. ನಿಮಗೆ ಕಡಿಮೆ ಬೆಲೆಯಲ್ಲಿ ನೀಡುತ್ತೇವೆ" ಎಂದು ನಕಲಿ ಚಿನ್ನವನ್ನು ನೀಡಿ ಬರೋಬ್ಬರಿ 5 ಲಕ್ಷ ರೂ. ವಂಚನೆ ಮಾಡಿದ್ದಾರೆ. ಆದರೆ, ಅದು ನಕಲಿ ಎಂದು ತಿಳಿದಾಗ ನರಪತ್ ಸಿಂಗ್ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ.
ಕಾರ್ಯಪ್ರವೃತರಾದ ಪಿಎಸ್ಐ ಅಬ್ದುಲ್ ಖಾದರ್ ಜೀಲಾನಿ ಹಾಗೂ ತಂಡ ಮೂವರು ಆರೋಪಿಗಳನ್ನು ಬಂಧಿಸಿದ್ದು, ಸದ್ಯ ಆರೋಪಿಗಳಿಂದ 4 ಲಕ್ಷ ರೂ ನಗದು ಮತ್ತು 1 ಕೆಜಿ ನಕಲಿ ಬಂಗಾರದ ಬಿಲ್ಲೆಗಳನ್ನು ವಶಕ್ಕೆ ಪಡೆದಿದ್ದಾರೆ.