ದಾವಣಗೆರೆ: ಕೆಲ ಪೌರಕಾರ್ಮಿಕರು ಕೆಲಸಕ್ಕೆ ಬಾರದೇ ದಫೇದಾರ್, ಆರೋಗ್ಯ ನಿರೀಕ್ಷಕರಿಗೆ ಬೆದರಿಕೆ ಹಾಕಿ ದಬ್ಬಾಳಿಕೆಯಿಂದ ಹಾಜರಾತಿ ಹಾಕಿಸಿಕೊಳ್ಳುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಇದಕ್ಕೆ ಬ್ರೇಕ್ ಹಾಕಲಾಗುವುದು ಎಂದು ಮಹಾನಗರ ಪಾಲಿಕೆಯ ಮೇಯರ್ ಬಿ. ಜಿ. ಅಜಯ್ ಕುಮಾರ್ ಹೇಳಿದ್ದಾರೆ.
ತಮ್ಮ ಬದಲಿಗೆ ಬೇರೊಬ್ಬರನ್ನು ಕೆಲಸಕ್ಕೆ ಕಳಿಸುವ ಪೌರಕಾರ್ಮಿಕರಿಗೆ ಮೇಯರ್ ಎಚ್ಚರಿಕೆ
ಕೆಲವು ಪೌರ ಕಾರ್ಮಿಕರು ಕೆಲಸಕ್ಕೆ ಗೈರು ಹಾಜರಾಗಿ ಬೇರೆಯೊಬ್ಬರನ್ನು ಕೆಲಸಕ್ಕೆ ಕಳುಹಿಸುತ್ತಿದ್ದಾರೆ. 18 ಸಾವಿರ ರೂಪಾಯಿ ವೇತನ ಇದ್ದರೂ ಬೇರೆಯೊಬ್ಬರನ್ನು ಕೆಲಸಕ್ಕೆ ಕಳುಹಿಸಿ 5 ರಿಂದ 6 ಸಾವಿರ ರೂಪಾಯಿ ನೀಡಿ ಹಣ ಮಾಡುತ್ತಿದ್ದಾರೆ ಎಂದು ಮೇಯರ್ ದೂರಿದರು.
ಪೌರಕಾರ್ಮಿಕರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆದ್ರೆ ಕೆಲವರು ಕೆಲಸಕ್ಕೆ ಗೈರು ಹಾಜರಾಗಿ ಬೇರೆಯೊಬ್ಬರನ್ನು ಕೆಲಸಕ್ಕೆ ಕಳುಹಿಸುತ್ತಿದ್ದಾರೆ. 18 ಸಾವಿರ ರೂಪಾಯಿ ವೇತನ ಇದ್ದರೂ ಬೇರೆಯೊಬ್ಬರನ್ನು ಕೆಲಸಕ್ಕೆ ಕಳುಹಿಸಿ 5 ರಿಂದ 6 ಸಾವಿರ ರೂಪಾಯಿ ನೀಡಿ ಹಣ ಮಾಡುತ್ತಿದ್ದಾರೆ. ಹುಷಾರಿಲ್ಲ, ಬೇರೆ ಕಾರಣ ನೀಡಿ ಈ ರೀತಿಯ ವರ್ತನೆ ಮಾಡುತ್ತಿದ್ದದ್ದು ಕಂಡು ಬಂದಿದೆ. ಹೆದರಿಸುವುದು, ದೌರ್ಜನ್ಯ ಎಸಗುವುದಕ್ಕೆ ಇನ್ಮುಂದೆ ಅವಕಾಶ ಕೊಡುವುದಿಲ್ಲ ಎಂದು ತಿಳಿಸಿದ್ದಾರೆ.
ಯಾರು ಕೆಲಸಕ್ಕೆ ಬರಬೇಕೋ ಅವರೇ ಬರಬೇಕು. ಬೇರೆಯವರು ಕೆಲಸಕ್ಕೆ ಬಂದರೆ ಆಗದು. ಸ್ವಚ್ಛ ನಗರಗಳ ಪಟ್ಟಿಯಲ್ಲಿ ದಾವಣಗೆರೆ 25 ನೇ ಸ್ಥಾನಕ್ಕೆ ಕುಸಿದಿದೆ. ಐದನೇ ಸ್ಥಾನಕ್ಕೆ ತರಲು ಶ್ರಮಿಸಲಾಗುವುದು. ಎರಡು ಶಿಫ್ಟ್ ಗಳಲ್ಲಿ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಬೆಳಿಗ್ಗೆ 6ರಿಂದ 11 ಗಂಟೆಯವರೆಗೆ ಹಾಗೂ ಮಧ್ಯಾಹ್ನ 2ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಗುಂಪಾಗಿ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದರೆ ನಗರ ಕ್ಲೀನ್ ಆಗುತ್ತದೆ. ಯಾವುದೇ ಸಂಶಯವಿಲ್ಲ ಎಂದು ಅಭಿಪ್ರಾಯಪಟ್ಟರು.