ದಾವಣಗೆರೆ:ದಾವಣಗೆರೆಯಲ್ಲಿ ಮಹಾನಗರ ಪಾಲಿಕೆಯ ಚುನಾವಣಾ ಕಾವು ಜೋರಾಗಿದೆ. ಇಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು, ಘಟಾನುಘಟಿ ನಾಯಕರು ಹಾಗೂ ಯುವಕರು ಅದೃಷ್ಟ ಪರಿಕ್ಷೆಗೆ ಇಳಿದಿದ್ದಾರೆ.
ದಾವಣಗೆರೆಯಲ್ಲಿ ರಂಗೇರಿದ ಪಾಲಿಕೆ ಚುನಾವಣೆ ಕಾವು: ಕಮಲ ಪಾಳಯಕ್ಕೆ ಬಂಡಾಯದ ಬಿಸಿ - ಇತ್ತೀಚಿನ ದಾವಣಗೆರೆ ಸುದ್ದಿಗಳು
ಟಿಕೆಟ್ ವಿಚಾರವಾಗಿ ಕಮಲ ಪಾಳಯಕ್ಕೆ ಬಂಡಾಯದ ಬಿಸಿ ತಟ್ಟಿದೆ. 45 ವಾರ್ಡ್ಗಳಿಗೆ 54 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಟಿಕೆಟ್ ಸಿಗದವರು ಪಕ್ಷೇತರರಾಗಿ ತೊಡೆ ತಟ್ಟಿದ್ದಾರೆ.
45 ವಾರ್ಡ್ಗಳಿಗೆ ಒಟ್ಟು 145 ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾಂಗ್ರೆಸ್ 39, ಬಿಜೆಪಿ 54, ಜೆಡಿಎಸ್ 09, ಸಿಪಿಐ 04, ಬಿಎಸ್ಪಿ 01, ಎಸ್ಡಿಪಿಐ 01 ಹಾಗೂ ಪಕ್ಷೇತರ 37 ಅಭ್ಯರ್ಥಿಗಳು ಸೇರಿ, ಒಟ್ಟು 145 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಇನ್ನು ಟಿಕೆಟ್ ವಿಚಾರವಾಗಿ ಕಮಲ ಪಾಳಯಕ್ಕೆ ಬಂಡಾಯದ ಬಿಸಿ ತಟ್ಟಿದೆ. 45 ವಾರ್ಡ್ಗಳಿಗೆ 54 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಟಿಕೆಟ್ ಸಿಗದವರು ಪಕ್ಷೇತರರಾಗಿ ತೊಡೆ ತಟ್ಟಿದ್ದಾರೆ. ಪಾಲಿಕೆಯ 42ನೇ ವಾರ್ಡ್ಗೆ ಜಗಳೂರು ಮಾಜಿ ಶಾಸಕ ಗುರುಸಿದ್ದನಗೌಡರ ಸೊಸೆ ಪ್ರಿಯಾ ರವಿಕುಮಾರ್ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ ಅವರಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಮಾವ ಗುರುಸಿದ್ದನಗೌಡ ಅವರೊಂದಿಗೆ ಆಗಮಿಸಿ, ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.