ದಾವಣಗೆರೆ: ನನ್ನ ಮಗಳು ಚೆನ್ನಾಗಿದ್ದು, ಆರೋಗ್ಯವಾಗಿದ್ದಾಳೆ. ಇನ್ನೆರಡು ದಿನದಲ್ಲಿ ಗುಣಮುಖಳಾಗಲಿದ್ದಾಳೆ. ವಿನಾ ಕಾರಣ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಮನವಿ ಮಾಡಿದ್ದಾರೆ.
ನಮ್ಮ ಕುಟುಂಬ ಹೋಮ್ ಕ್ವಾರಂಟೈನ್ನಲ್ಲಿರುತ್ತೆ, ಏ. 14ರ ಬಳಿಕ ಭೇಟಿಯಾಗೋಣ: ಸಂಸದ ಸಿದ್ದೇಶ್ವರ್ - corona viras
ನನ್ನ ಮಗಳಿಗೆ ಚಿಕಿತ್ಸೆ ಮುಂದುವರಿದಿದೆ. ಆದರೂ ಸುಳ್ಳು ವದಂತಿ ಸೃಷ್ಟಿಸುತ್ತಿರುವುದು ಮನಸ್ಸಿಗೆ ನೋವು ತಂದಿದೆ ಎಂದು ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದ್ದಾರೆ.
ಈ ಸಂಬಂಧ ವಿಡಿಯೋ ಬಿಡುಗಡೆ ಮಾಡಿರುವ ಅವರು, ನನ್ನ ಮಗಳಿಗೆ ಚಿಕಿತ್ಸೆ ಮುಂದುವರಿದಿದೆ. ಆದರೂ ಸುಳ್ಳು ವದಂತಿ ಸೃಷ್ಟಿಸುತ್ತಿರುವುದು ಮನಸ್ಸಿಗೆ ನೋವು ತಂದಿದೆ. ನನಗೆ, ಲಂಡನ್ ಹಾಗೂ ಬ್ರಿಟನ್ನಿಂದ ಬಂದ ಗಂಡು ಮಕ್ಕಳು, ಮೊಮ್ಮಕ್ಕಳು, ಹೆಂಡತಿ ಎಲ್ಲರಿಗೂ ಕೊರೊನಾ ನೆಗೆಟಿವ್ ಬಂದಿದೆ. ನಿತ್ಯವೂ ಹೇಗಿದ್ದಾರೆ ಎಂದು ಸಾವಿರಾರು ಫೋನ್ ಕಾಲ್ ಬರುತ್ತಿವೆ.
21 ದಿನ ನಾವೆಲ್ಲರೂ ಹೋಮ್ ಕ್ವಾರಂಟೈನ್ನಲ್ಲಿರುತ್ತೇವೆ. ಜನರು ಸಹ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. 21 ದಿನ ಆದ ಮೇಲೆ ಮತ್ತೆ ಸಿಗೋಣ. ಅಲ್ಲಿಯವರೆಗೆ ಮನೆಯಲ್ಲೇ ಇರಿ. ಹೊರಗೆ ಬರಬೇಡಿ ಎಂದು ಸಿದ್ದೇಶ್ವರ್ ಮನವಿ ಮಾಡಿದ್ದಾರೆ.