ದಾವಣಗೆರೆ: ಸೈಬರ್ ವಂಚನೆ ಪ್ರಕರಣದಲ್ಲಿ ಇಲ್ಲಿನ ಸಿಇಎನ್ ಪೊಲೀಸರು ರಾಜಸ್ಥಾನ ಮೂಲದ ಅಮನ್ ತಿವಾರಿ ಎಂಬಾತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ದಾವಣಗೆರೆ ನಿವಾಸಿ ರಕ್ಷಿತ ಎಂಬುವವರ ಫ್ಲಿಪ್ ಕಾರ್ಟ್ ಖಾತೆ ಹ್ಯಾಕ್ ಮಾಡಿದ್ದ ಈತನನ್ನು ರಾಜಸ್ಥಾನದ ಅಲ್ವಾರ್ ನಗರದಲ್ಲಿ ಬಂಧಿಸಲಾಗಿದೆ. ಅಲ್ಲಿನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಬಳಿಕ ದಾವಣಗೆರೆಗೆ ಕರೆತಂದು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಏನಿದು ಪ್ರಕರಣ?: ರಕ್ಷಿತ್ ಎಂಬುವವರು ಫ್ಲಿಪ್ ಕಾರ್ಟ್ ಪೇ ಲೇಟರ್ ಖಾತೆ ಹೊಂದಿದ್ದರು. ಜನವರಿ 21ರಂದು ಯಾರೋ ಅಪರಿಚಿತರು ಇವರ ಖಾತೆಯನ್ನು ಹ್ಯಾಕ್ ಮಾಡುವ ಮೂಲಕ ಪಾಸ್ವರ್ಡ್ ಬದಲಾಯಿಸಿ, ಅದೇ ಖಾತೆಯಿಂದ ಫ್ಲಿಪ್ ಕಾರ್ಟ್ ಡಿಜಿಟಲ್ ವೋಚರ್ಗಳನ್ನು ಪಡೆದುಕೊಂಡು 45,000 ರೂ.ಗಳ ವಂಚನೆ ಎಸಗಿದ್ದರು.