ದಾವಣಗೆರೆ: ಬ್ಯಾಂಕ್ನಿಂದ ₹ 2 ಲಕ್ಷ ಬಿಡಿಸಿಕೊಂಡು ಬೈಕ್ನ ಮುಂಭಾಗದ ಬ್ಯಾಗ್ನಲ್ಲಿಟ್ಟಿದ್ದ ರೈತ ದಾರಿ ಮಧ್ಯೆ ₹ 2 ಸಾವಿರ ಚಿಲ್ಲರೆ ತರಲು ತೆರಳಿದ್ದ ವೇಳೆ ಕಳ್ಳರು ಕೈಚಳಕ ತೋರಿಸಿದ್ದಾರೆ.
ನಗರದ ಪಿಬಿ ರಸ್ತೆಯಲ್ಲಿರುವ ಆಕ್ಸಿಸ್ ಬ್ಯಾಂಕ್ನಿಂದ ಹಳೆ ಕುಂದುವಾಡ ಗ್ರಾಮದ ವಿರುಪಾಕ್ಷಪ್ಪ ಎಂಬುವರು ಹಣ ತೆಗೆದುಕೊಂಡು ಹೋಗುವ ಖದೀಮರು ಹಣ ಕದ್ದೊಯ್ದಿದ್ದಾರೆ.
ಹಣ ಕಳೆದುಕೊಂಡ ಹಳೆ ಕುಂದುವಾಡ ಗ್ರಾಮದ ವಿರುಪಾಕ್ಷಪ್ಪ ತೋಟದ ಕೂಲಿ ಕಾರ್ಮಿಕರಿಗೆ ನೀಡಲು ಚಿಲ್ಲರೆ ಬೇಕಿತ್ತು. ಹಾಗಾಗಿ 2 ಸಾವಿರ ರೂ. ನೋಟಿಗೆ ಚಿಲ್ಲರೆ ತರಲು ಹೋದಾಗ ಖದೀಮರು ಈ ಕೃತ್ಯ ನಡೆಸಿದ್ದಾರೆ. ಸಾಲ ಮಾಡಿದ ಹಣ, ದಯವಿಟ್ಟು ಹುಡುಕಿಕೊಡಿ ಎಂದು ರೈತ ವಿರುಪಾಕ್ಷಪ್ಪ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಖದೀಮರು ಬ್ಯಾಂಕ್ನಿಂದಲೇ ಹಿಂಬಾಲಿಸಿ, ಹಣ ಕದ್ದು ಪರಾರಿಯಾಗಿದ್ದಾರೆ.
ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.