ಕರ್ನಾಟಕ

karnataka

ETV Bharat / state

ದೇವಿಯ ಪಲ್ಲಕ್ಕಿ ಹೊತ್ತು ಬೆಂಕಿ ತುಳಿಯುವ ಮೂಲಕ ದಸರಾ ಆಚರಣೆ..

ದಸರಾ ಹಬ್ಬ ಹಿನ್ನೆಲೆ ಬನ್ನಿ ಮುಡಿದು ದೇವಿಯ ಪಲ್ಲಕ್ಕಿ ಹೊತ್ತು ಕೆಂಡ ತುಳಿಯುವ ಮೂಲಕ ವಿಶೇಷವಾಗಿ ದಸರಾ ಆಚರಣೆ ಮಾಡಿದ ಭಕ್ತರು.

Kn_dvg_01_
ಬೆಂಕಿ ತುಳಿಯುವ ಮೂಲಕ ದಸರಾ ಆಚರಣೆ

By

Published : Oct 8, 2022, 3:43 PM IST

Updated : Oct 8, 2022, 4:17 PM IST

ದಾವಣಗೆರೆ: ದಸರಾ ಹಬ್ಬದಂದು ಪ್ರತಿಯೊಬ್ಬರು ಬನ್ನಿ ಮುಡಿದು ಸ್ನೇಹಿತರು, ಸಂಬಂಧಿಕರಿಗೆ ನೀಡಿ ಹರಸುವುದ ಸಾಮಾನ್ಯ, ಅದರೇ ದಾವಣಗೆರೆಯಲ್ಲಿ ದಸರಾ ಹಬ್ಬಕ್ಕೆ ಬನ್ನಿ ಮುಡಿದು, ಬಳಿಕ ಮತ್ತೊಮ್ಮೆ ಮರಿ ಬನ್ನಿ ಮುಡಿದು ಕೆಂಡಾ ತುಳಿಯುವ ಮೂಲಕ ದಸರಾ ಆಚರಣೆ ಮಾಡುವ ಅಪರೂಪದ ಪದ್ಧತಿ ಜಾರಿಯಲ್ಲಿದೆ.

ದಾವಣಗೆರೆಯ ಹೊರವಲಯದ ಹೊಸ ಕುಂದುವಾಡದಲ್ಲಿ ಗ್ರಾಮ ದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ ಪೂಜೆ ಸಲ್ಲಿಸಿ ಮರಿ ಬನ್ನಿ ಮುಡಿದು ಭಕ್ತರು ಕೆಂಡ ಆಯ್ದರು. ಮೊದಲು ಗಂಗೆ ಪೂಜೆ ನೆರವೇರಿಸಿದ ಭಕ್ತರು ಬನ್ನಿ ಮುಡಿದ ಬಳಿಕ ದೇವಿಯೊಂದಿಗೆ ಕೆಂಡ ಪ್ರವೇಶ ಮಾಡಿದ್ರು.

ಹರಕೆ ಹೊತ್ತ ಭಕ್ತರು ದುರ್ಗಾದೇವಿ ಮೂರ್ತಿಯ ಪಲ್ಲಕ್ಕಿ ಹೊತ್ತು ಕೆಂಡ ಆಯ್ದಿದ್ದು ವಿಶೇಷವಾಗಿತ್ತು. ಇನ್ನು ತಮ್ಮ ಇಷ್ಟಾರ್ಥಗಳು ಈಡೇರಿದ ಬೆನ್ನಲ್ಲೇ ಪ್ರತಿ ವರ್ಷ ದಸರಾ ದಿನದಂದು ಭಕ್ತರು ಬೇರೆ ಬೇರೆ ಜಿಲ್ಲೆಗಳಿಂದ ಇಲ್ಲಿಗೆ ಆಗಮಿಸಿ ಕೆಂಡ ತುಳಿದು ಹರಕೆ ತೀರಿಸಿ ದಸರಾ ಆಚರಣೆ ಮಾಡುತ್ತಾರೆ.

ಇದನ್ನೂ ಓದಿ:ನರಿಕಲ್ಲು ಮಾರಮ್ಮನ ಪವಾಡ: ಈ ಹೆದ್ದಾರಿಯ ಕಲ್ಲು ಪೂಜಿಸಿದ್ರೆ ಮಂಡಿ, ಕೀಲು ನೋವು ಮಾಯ!?

Last Updated : Oct 8, 2022, 4:17 PM IST

ABOUT THE AUTHOR

...view details