ಕರ್ನಾಟಕ

karnataka

ETV Bharat / state

Rape case: ದಾವಣಗೆರೆಯಲ್ಲಿ ಜೈಲಿನ ಗೋಡೆ ಜಿಗಿದು ಪರಾರಿಯಾಗಿದ್ದ ಅತ್ಯಾಚಾರ ‌ಪ್ರಕರಣದ ಆರೋಪಿ ಸೆರೆ - ಜೈಲಿನಿಂದ ಪರಾರಿಯಾಗಿದ್ದ ಆರೋಪಿ ವಸಂತ

ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದಾತ ಜೈಲಿನಿಂದ ಪರಾರಿಯಾಗಿದ್ದು, ಮತ್ತೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

escaped accused arrested
escaped accused arrested

By ETV Bharat Karnataka Team

Published : Aug 27, 2023, 2:50 PM IST

Updated : Aug 28, 2023, 4:19 PM IST

ಆರೋಪಿ ಗೋಡೆ ಜಿಗಿದು ಪರಾರಿಯಾಗುತ್ತಿರುವ ದೃಶ್ಯ

ದಾವಣಗೆರೆ:ಅತ್ಯಾಚಾರ ಪ್ರಕರಣದಲ್ಲಿ ಸೆರೆವಾಸ ಅನುಭವಿಸುತ್ತಿದ್ದ ಆರೋಪಿಯೋರ್ವ ಜೈಲಿನಿಂದ ಪರಾರಿಯಾಗಿರುವ ಘಟನೆ ಕಳೆದ ದಿನ ಶನಿವಾರ ಸಂಜೆ ನಡೆದಿತ್ತು. ಆದರೆ ಇದೀಗ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ವಸಂತ (23) ಜೈಲಿನಿಂದ ಪರಾರಿಯಾಗಿದ್ದ ಆರೋಪಿ.

ದಾವಣಗೆರೆ ನಗರದ ಉಪ‌ಕಾರಾಗೃಹದ ಗೋಡೆ ಜಿಗಿದು ಪರಾರಿಯಾದ ಆರೋಪಿ ವಸಂತ್​ನನ್ನು ಹಿಡಿಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ದಾವಣಗೆರೆ ನಗರದ ಹೊರವಲಯದ ಕರೂರು ಪ್ರದೇಶದ ನಿವಾಸಿ ವಸಂತ ವೃತ್ತಿಯಿಂದ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಸಂತ್ ವಿರುದ್ಧ ಕಳೆದ ಎರಡು ದಿನಗಳ‌ ಹಿಂದೆ ದಾವಣಗೆರೆ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿತ್ತು.

ದೂರು ದಾಖಲಾದ ಹಿನ್ನೆಲೆಯಲ್ಲಿ ಮಹಿಳಾ ಠಾಣೆಯ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದರೆ ಕಳೆದ ಶನಿವಾರ ಉಪ ಕಾರಾಗೃಹದ ಗೋಡೆ ಜಿಗಿದು ಆರೋಪಿ ವಸಂತ್ ಪರಾರಿಯಾಗಿದ್ದ. ಜಿಗಿದ ಪರಿಣಾಮ ಆರೋಪಿ ಕಾಲಿಗೆ ಪೆಟ್ಟಾಗಿತ್ತು, ಆದರೂ ಅದನ್ನು ಲೆಕ್ಕಿಸದೇ ಪರಾರಿಯಾಗಿದ್ದ. ಇದಾದ ಕೆಲ ಹೊತ್ತಿನ ನಂತರ ಜೈಲ್ ಸಿಬ್ಬಂದಿಗೆ ಮಾಹಿತಿ‌ ತಿಳಿದಿದ್ದು, ಆರೋಪಿಯನ್ನು ಹುಡುಕಿದರು ಕೂಡ ಪತ್ತೆಯಾಗಿರಲಿಲ್ಲ. ಇದರ ಸಂಬಂಧ ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.‌

ಕೊನೆಗೂ ಬಂಧಿಸಿದ ಬಸವನಗರ ಪೊಲೀಸರು:ಕಳೆದ ದಿನ ಜೈಲಿನಿಂದ ಪರಾರಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ ವಸಂತ್​ನನ್ನು ಬಸವನಗರ ಠಾಣೆಯ ಪೊಲೀಸರು ಬಂಧಿಸಿ ಕರೆತಂದಿದ್ದೇವೆ ಎಂದು ಬಸವನಗರ ಪೊಲೀಸ್ ಠಾಣೆಯ ಪಿಎಸ್ಐ ದೂರವಾಣಿ ಮೂಲಕ ಈಟಿವಿ ಭಾರತ್​ಗೆ ಮಾಹಿತಿ ನೀಡಿದರು.

ಜೈಲಿನಿಂದ ಪರಾರಿಯಾಗಿದ್ದ ಆರೋಪಿ ಕಳೆದ ದಿನ ಹರಿಹರ ತಾಲೂಕಿನ ದುಗ್ಗಾವತಿ ಗ್ರಾಮದಲ್ಲಿ ತಲೆ ಮರೆಸಿಕೊಂಡಿದ್ದನು. ಪ್ರಕರಣ ದಾಖಲಾದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್​ ಸಿಬ್ಬಂದಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ದುಗ್ಗವತಿ ಗ್ರಾಮದ ಬಳಿ ಇಂದು ಬೆಳಗ್ಗೆ(ಭಾನುವಾರ) ಬಂಧಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ಕೋಲಾರ: ಅನ್ಯಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ತಂದೆ

Last Updated : Aug 28, 2023, 4:19 PM IST

ABOUT THE AUTHOR

...view details