ದಾವಣಗೆರೆ: ಮ್ಯಾಂಚೇಸ್ಟರ್ ನಲ್ಲಿ ನಡೆಯುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಕ್ರಿಕೆಟ್ ಪ್ರಿಯರು ಕಾತರದಿಂದ ಕಾಯುತ್ತಿದ್ದು, ಬೆಣ್ಣೆನಗರಿ ಮಂದಿಯೂ ಪಂದ್ಯ ವೀಕ್ಷಿಸಲು ತುದಿಗಾಲ ಮೇಲೆ ನಿಂತಿದ್ದಾರೆ.
ನಾಳೆ ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯ: ಮಳೆ ಬರದಿರಲಿ ಎಂದು ಪ್ರಾರ್ಥನೆ..! - kannadanews
ನಾಳೆ ನಡೆಯಲಿರುವ ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಮಳೆ ಬಾರದು ಟೀಮ್ ಇಂಡಿಯಾ ಗೆದ್ದು ಬೀಗಬೇಕು ಎಂದು ದಾವಣಗೆರೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.
ವಿಶ್ವಕಪ್ ಪಂದ್ಯಾವಳಿಯಲ್ಲಿ ಇದುವರೆಗೆ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಸೋತಿಲ್ಲ. ಗೆಲುವಿನ ಕೇಕೆಯನ್ನು ಈ ಬಾರಿಯೂ ಮುಂದುವರಿಸಲಿದೆ ಎಂಬ ವಿಶ್ವಾಸ ಮತ್ತು ಅಚಲ ನಂಬಿಕೆ ಕ್ರಿಕೆಟ್ ಅಭಿಮಾನಿಗಳದ್ದು. ಜಗತ್ತೇ ನೋಡುವಂಥ ಈ ಮ್ಯಾಚ್ ಗೆ ವರುಣ ಅಡ್ಡಿಪಡಿಸದಿದ್ದರೆ ಸಾಕು ಎಂದು ಕ್ರಿಕೆಟ್ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಪುಲ್ವಾಮ ದಾಳಿ ಬಳಿಕ ಎರಡು ರಾಷ್ಟ್ರಗಳ ನಡುವೆ ಸಂಘರ್ಷದ ವಾತಾವರಣವಿದ್ದರೂ ಕ್ರಿಕೆಟ್ ಮೇಲೆ ಪರಿಣಾಮ ಬೀಳಬಾರದು. ಕ್ರೀಡಾಸ್ಫೂರ್ತಿಯಷ್ಟೇ ಮುಖ್ಯ. ವಿರಾಟ್ ಕೊಯ್ಲಿ ನೇತೃತ್ವದ ತಂಡ ಪಾಕ್ ವಿರುದ್ಧ ಗೆಲ್ಲಲಿ ಎಂದು ಶುಭ ಹಾರೈಸಿದ್ದಾರೆ ಇಲ್ಲಿನ ಕ್ರಿಕೆಟ್ ಅಭಿಮಾನಿಗಳು.