ದಾವಣಗೆರೆ: ಸ್ಮಾರ್ಟ್ಸಿಟಿ ಯೋಜನೆಯಡಿ ವಿಶಿಷ್ಟ ರೀತಿಯಲ್ಲಿ ಕಂಟ್ರೋಲ್ ಕಮಾಂಡ್ ರೂಂ ಸಿದ್ಧವಾಗಿದೆ. ಇಲ್ಲಿರುವ 20 ಪೊಲೀಸ್ ಸಿಬ್ಬಂದಿ ಇಡೀ ನಗರದ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಅಲ್ಲದೇ ಸಂಚಾರಿ ನಿಯಮ ಪಾಲಿಸದವರಿಗೆ ದಂಡದ ಬಿಸಿ ಮುಟ್ಟಿಸುತ್ತಿದ್ದಾರೆ.
ನಗರದ 109 ಕಡೆಗಳಲ್ಲಿ ಸಿಸಿಟಿವಿ ಸರ್ವೆಲೆನ್ಸ್ ವ್ಯವಸ್ಥೆ ಮಾಡಲಾಗಿದ್ದು, ಒಟ್ಟು 211 ಕಡೆ ಸಿಸಿ ಕ್ಯಾಮೆರಾಗಳನ್ನು ಆಳವಡಿಕೆ ಮಾಡಲಾಗಿದೆ. 5 ಜಾಗಗಳಲ್ಲಿ ವೇರಿಯೇಬಲ್ ಮೆಸೇಜ್ ಸೈನ್ ಬೋರ್ಡ್‌ಗಳನ್ನು ಅಳವಡಿಸಲಾಗಿದೆ. ಮೊಬೈಲ್ ಸರ್ವೆಲೆನ್ಸ್ ವಾಹನಗಳು ಜನರ ಸಹಾಯಕ್ಕೆ ಬರುತ್ತಿದ್ದು, ಸಿಸಿಟಿವಿ ಕ್ಯಾಮೆರಾಗಳ ಸಹಾಯದಿಂದ ವಾಹನಗಳ ನಂಬರ್ ಪ್ಲೇಟ್‌ಗಳನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ.
ಕಳ್ಳತನವಾದ ಅಥವಾ ಸಂಶಯಾಸ್ಪದ ವಾಹನಗಳನ್ನು ಗುರುತಿಸಲು ಇದು ಸಹಾಯಕವಾಗಿದೆ. ಈ ವ್ಯವಸ್ಥೆಯನ್ನು ಬಳಸಿ ಬೈಕ್ ಕಳ್ಳತನ, ಕೊಲೆ, ಹಣ ದೋಚಿದ ಒಟ್ಟು 12 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಕಳೆದ ಮೂರು ತಿಂಗಳಲ್ಲಿ ನಿಯಮ ಉಲ್ಲಂಘನೆ ಮಾಡಿದ 29,080 ವಾಹನಗಳಿಗೆ ಚಲನ್ ಮೂಲಕ ದಂಡದ ನೋಟಿಸ್ಗಳನ್ನು ಮನೆಗಳಿಗೆ ಕಳುಹಿಸಲಾಗಿದೆ ಎಂದು ಎಸ್ಪಿ ಸಿಬಿ ರಿಷ್ಯಂತ್ ತಿಳಿಸಿದರು.