ಕರ್ನಾಟಕ

karnataka

ETV Bharat / state

ಏಕವಚನದಲ್ಲೇ ಕಿತ್ತಾಡಿಕೊಂಡ ಸಂಸದ, ಶಾಸಕ...! ಮುಂದೇನಾಯ್ತು ? - Corona meeting in Davanagere

ನಗರದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾದ ಕಾರಣ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಸುಧಾಕರ್ ಉಪಸ್ಥಿತಿಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ಕರೆಯಲಾಗಿತ್ತು. ಸಭೆಯ ಮಧ್ಯದಲ್ಲೇ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸಂಸದ ಜಿ. ಎಂ. ಸಿದ್ದೇಶ್ವರ್ ಕಿತ್ತಾಡಿಕೊಂಡಿದ್ದಾರೆ.

Corona meeting
ಸಭೆ

By

Published : May 9, 2020, 6:23 PM IST

ದಾವಣಗೆರೆ:ಕೊರೊನಾ ಕುರಿತು ಜಿಲ್ಲಾಡಳಿತ ಭವನದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಸಂಸದ ಜಿ. ಎಂ. ಸಿದ್ದೇಶ್ವರ್ ಹಾಗೂ ಚನ್ನಗಿರಿಯ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಏಕವಚನದಲ್ಲಿ ಕಿತ್ತಾಡಿದ ಘಟನೆ ನಡೆದಿದ್ದು, ಬಿಜೆಪಿ ಜನಪ್ರತಿನಿಧಿಗಳ ಈ ವರ್ತನೆಗೆ ಸಚಿವರು ಹಾಗೂ ಅಧಿಕಾರಿಗಳು ಶಾಕ್ ಆದರು.

ಸಭೆಯಲ್ಲಿ ಕಿತ್ತಾಡಿಕೊಂಡ ಸಂಸದ, ಶಾಸಕ

ನಗರದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾದ ಕಾರಣ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಸುಧಾಕರ್ ಉಪಸ್ಥಿತಿಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ಕರೆಯಲಾಗಿತ್ತು. ಚರ್ಚೆಯ ಮಧ್ಯೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಉಚಿತವಾಗಿ ನೀರು ಕೊಡಿ. ಜನರು ಕಷ್ಟದಲ್ಲಿದ್ದು, ಬೆಳೆಗಳು ಒಣಗುತ್ತಿವೆ ಅಂದ್ರು.

ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಸಂಸದ ಜಿ. ಎಂ. ಸಿದ್ದೇಶ್ವರ್ " ಏಯ್ ಸುಮ್ನೇ ಕುಳಿತುಕೊಳ್ಳೋ. ಏನೇನೋ ಮಾತನಾಡಬೇಡ, ಎಲ್ಲಾ ಪುಕ್ಸಟ್ಟೆ ಕೊಡ್ಬೇಕಾ' ಎಂದು ತಿರುಗೇಟು ನೀಡಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮಾಡಾಳ್, "ಏಯ್ ನಿಂದೇನೋ, ಕುಳಿತುಕೊಳ್ಳೋ ಅಂತಾ ಏಕವಚನದಲ್ಲೇ ಬೈದಾಡಿದರು.

ಮೈಕ್ ಹಿಡಿದುಕೊಂಡು ಸಿಟ್ಟಿಗೆದ್ದ ಸಿದ್ದೇಶ್ವರ್ ಅವರು ಮಾಡಾಳ್ ವಿರೂಪಾಕ್ಷಪ್ಪ ಬಳಿ ಬಂದ್ರು. ಆಗ ಏಳಲು ಮುಂದಾಗುತ್ತಿದ್ದಂತೆ ಅಲ್ಲೇ ಇದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಸಮಾಧಾನಪಡಿಸಿ ಕೂರಿಸಿದರು. ಕೈಕೈ ಮಿಲಾಯಿಸುವ ಹಂತ ತಲುಪಿದ್ದು ಸಭೆಯಲ್ಲಿದ್ದವರು ಒಂದು ಕ್ಷಣ ದಂಗಾದರು.

ಸಭೆ ಬಳಿಕವೂ ಬಿಜೆಪಿ ನಾಯಕರ ಜಗಳ ಮುಂದುವರೆಯಿತು.‌ ಸಿದ್ದೇಶ್ವರ್ ಕಾರು ಹತ್ತುವ ವೇಳೆ, ನಡೆದುಕೊಂಡು ಬಂದ ಮಾಡಾಳ್ ವಿರೂಪಾಕ್ಷಪ್ಪ ನಡುವೆ ಮತ್ತೆ ಜಗಳವಾಯ್ತು. ಜನಪ್ರತಿನಿಧಿಗಳ ಈ ನಡೆಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details