ಕರ್ನಾಟಕ

karnataka

By

Published : Jun 4, 2021, 6:40 PM IST

Updated : Jun 4, 2021, 8:32 PM IST

ETV Bharat / state

ಲಸಿಕೆ ತರಿಸಿ ನಾವೂ ಕೈಜೋಡಿಸ್ತೀವಿ ಅಂದ್ವಿ , ಸರ್ಕಾರ ಕಿವಿಕೊಡಲಿಲ್ಲ : ಶಾಮನೂರು ಶಿವಶಂಕರಪ್ಪ

₹50 ಸಾವಿರ ಅಕ್ಸಿಜನ್ ಪ್ಲಾಂಟ್ ಹಾಕಿಸಿ ಫೋಟೋ ತೆಗೆಸಿ ಪ್ರಚಾರ ತಗೋತಾರೆ. ನಾವು ಮಾಡಿದ ರೀತಿ ಕೆಲಸ ಅವರು ಮಾಡಲಿ ನೋಡೋಣ..

shayamauru
shayamauru

ದಾವಣಗೆರೆ :ಲಸಿಕೆ ತರಿಸಿ, ನಾವೂ ಕೈಜೋಡಿಸ್ತೀವಿ ಅಂತ ಸರ್ಕಾರಕ್ಕೆ ಹೇಳಿದ್ವಿ. ಅದಕ್ಕೆ ಸರ್ಕಾರ ಕಿವಿಕೊಡಲಿಲ್ಲ, ಅದಕ್ಕೆ ನಾವೇ ಮಲ್ಲಿಕಾರ್ಜುನ್ ಖರ್ಗೆ ಸಹಾಯದಿಂದ ಲಸಿಕೆ ತರಿಸಿದ್ದೇವೆ ಎಂದು ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ದಾವಣಗೆರೆ ನಗರದ ದುಗ್ಗಮ್ಮ ದೇವಸ್ಥಾನದ ಮುಂಭಾಗ ಹಮ್ಮಿಕೊಂಡಿದ್ದ ಉಚಿತ ಲಸಿಕಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿರೋಧಿಗಳು ₹9 ಕೋಟಿ ಡಿಪಾಸಿಟ್ ಮಾಡಿ ಎಂದು ಹೇಳಿದ್ರು.

ಡಿಪಾಸಿಟ್ ಮಾಡೋಕೆ ಅವ್ರಿಗೆ ಏನ್ ನಮ್ ಅಕೌಂಟ್ ತೋರಿಸಬೇಕಾ, ₹50 ಸಾವಿರ ಅಕ್ಸಿಜನ್ ಪ್ಲಾಂಟ್ ಹಾಕಿಸಿ ಫೋಟೋ ತೆಗೆಸಿ ಪ್ರಚಾರ ತಗೋತಾರೆ. ನಾವು ಮಾಡಿದ ರೀತಿ ಕೆಲಸ ಅವರು ಮಾಡಲಿ ನೋಡೋಣ ಎಂದು ಸಂಸದ ಜಿಎಂ ಸಿದ್ದೇಶ್ವರ್​ಗೆ ಶಾಮನೂರು ಶಿವಶಂಕರಪ್ಪ ಟಾಂಗ್ ನೀಡಿದರು.

ಸರ್ಕಾರದ ವತಿಯಿಂದ ನಮ್ಮ ದಾವಣಗೆರೆಯ ಜನರಿಗೆ ಸರಿಯಾಗಿ ಲಸಿಕೆ ನೀಡಲಿಲ್ಲ: ಮಾಜಿ ಸಚಿವ ಮಲ್ಲಿಕಾರ್ಜುನ್
ಸರ್ಕಾರದ ವತಿಯಿಂದ ನಮ್ಮ ದಾವಣಗೆರೆಯ ಜನರಿಗೆ ಸರಿಯಾಗಿ ಲಸಿಕೆ ನೀಡಲಿಲ್ಲ,18 ಲಕ್ಷ ಜನರಿದ್ದು ಅವರಿಗೆ 10 ಸಾವಿರ ಲಸಿಕೆ ಕೊಡ್ತಾ ಇದ್ರು. ದಕ್ಷಿಣ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ರು ಎಂದು ಮಾಜಿ ಸಚಿವ ಎಸ್ ಎಸ್ ಮಲ್ಲಿಮಾರ್ಜುನ್ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.


ಸರ್ಕಾರ ಲಸಿಕೆ ನೀಡಲು ನಿರ್ಲಕ್ಷ್ಯ ಮಾಡಿದ್ದರಿಂದ ನಾವೇ ಜನರಿಗೆ ಲಸಿಕೆ ನೀಡಲು ಮುಂದಾಗಿದ್ದೇವೆ. ಪ್ರತಿಯೊಬ್ಬರು ಲಸಿಕೆ ಪಡೆಯಬೇಕಿದೆ, ನಾವು ಮಾಡ್ತಾ ಇರುವ ಈ ಕಾರ್ಯಕ್ರಮ ಇಡೀ ದೇಶಕ್ಕೆ ಮಾದರಿಯಾಗಿದ್ದು, ಈ ರೀತಿಯಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರು ಮಾಡಿದರೆ ಒಳ್ಳೆಯದು ಎಂದರು.

Last Updated : Jun 4, 2021, 8:32 PM IST

ABOUT THE AUTHOR

...view details