ದಾವಣಗೆರೆ :ನಾಳೆ ನಡೆಯುವ ಕಾರ್ಯಕಾರಣಿ ಸಭೆಯಲ್ಲಿ ಮುಂದಿನ ದಿನಗಳಲ್ಲಿ ಎದುರಾಗುವ ಚುನಾವಣೆಗಳನ್ನ ಹೇಗೆ ಎದುರಸಬೇಕೆಂದು ರಣತಂತ್ರ ರೂಪಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ನಾಳಿನ ಕಾರ್ಯಕಾರಣಿ ಸಭೆ ಕುರಿತಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿರುವುದು.. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೂತ್ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕೂಡ ಪಕ್ಷದ ಬಲವರ್ಧನೆ ಮಾಡುವ ಬಗ್ಗೆ ನಾಳೆಯ ಸಭೆಯಲ್ಲಿ ಚಿಂತನೆ ನಡೆಸಲಿದ್ದೇವೆ. ಪ್ರಸ್ತುತ ವಿಚಾರಗಳ ಬಗ್ಗೆ ಕೂಡ ನಾಳೆ ಚರ್ಚಿಸಲಾಗುತ್ತದೆ ಎಂದರು.
ಇವತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆ ಬಿಂಬಿಸುವ ಪ್ರದರ್ಶನವನ್ನು ಉದ್ಘಾಟನೆ ಮಾಡಿದ್ದೇವೆ. ಕೇಂದ್ರದ ಹಲವಾರು ಜನೋಪಯೋಗಿ ಕಾರ್ಯಕ್ರಮಗಳಿವೆ. ಯಡಿಯೂರಪ್ಪ ನೇತೃತ್ವದಲ್ಲಿ ಕೈಗೊಂಡ ಸಾಧನೆ ಪ್ರತಿನಿಧಿಸುವ ಪ್ರದರ್ಶನವಾಗಿದೆ.
ನಾಳಿನ ಸಭೆಯಲ್ಲಿ ಅನೇಕ ವಿಚಾರಗಳನ್ನು ಚರ್ಚೆ ನಡೆಸಲು ತೀರ್ಮಾನವಾಗಿದೆ. ಪಕ್ಷದ ಬಲವರ್ಧನೆಗೆ ಮುಂಬರುವ ಚುನಾವಣೆಗಳನ್ನ ಯಾವ ರೀತಿ ಎದುರಿಸಬೇಕು ಎನ್ನುವ ರಣತಂತ್ರ ರೂಪಿಸೋಕೆ ನಾಳೆ ತೀರ್ಮಾನ ಮಾಡ್ತೇವೆ ಎಂದರು.
ಓದಿ: ನಿರುದ್ಯೋಗ ದಿನ ಆಚರಣೆ ಜತೆಗೆ ಪಿಎಂಗೆ ನಿಮ್ಮ ಪದವಿ ಪ್ರಮಾಣ ಪತ್ರ ಹಿಂದಿರುಗಿಸಿ : ಯುವಕರಿಗೆ ಡಿಕೆಶಿ ಕರೆ