ದಾವಣಗೆರೆ:ದಾವಣಗೆರೆ ಮೂಲದ ಖ್ಯಾತ ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್ ಜವಳಿ ಮಳಿಗೆ ಆನ್ಲೈನ್ ತಾಣವನ್ನು ಆರಂಭಿಸಿದ್ದು, bscfashion.comವೆಬ್ಸೈಟ್ ಮೂಲಕ ದೇಶದ ಮೂಲೆಮೂಲೆಗಳಿಗೂ ತಲುಪಿಸಲು ಸಂಸ್ಥೆ ಮುಂದಡಿ ಇಟ್ಟಿದೆ.
ಈ ನಿಟ್ಟಿನಲ್ಲಿ ಆರಂಭಿಕ ಹಂತದಲ್ಲಿ ಡ್ರೆಸ್ ಮೆಟೀರಿಯಲ್ ಹಾಗೂ ಸೀರೆಗಳನ್ನು ಆನ್ಲೈನ್ನಲ್ಲಿ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಇಂದಿನಿಂದ ಈ ಸೌಲಭ್ಯ ದೇಶದ ಮೂಲೆಮೂಲೆಗಳಿಗೂ ಆನ್ಲೈನ್ ಮೂಲಕ ದೊರೆಯಲಿದ್ದು, 500 ರಿಂದ 25 ಸಾವಿರ ರೂ ಮೌಲ್ಯದ ಸೀರೆಗಳು ಸದ್ಯ ಲಭ್ಯವಿವೆ.