ಕರ್ನಾಟಕ

karnataka

ETV Bharat / state

ಮೊಬೈಲ್ ಹುಡುಕಲು ನೆರವಾದ CEIR ಪೋರ್ಟಲ್: ₹20 ಲಕ್ಷ ಮೌಲ್ಯದ 130 ಮೊಬೈಲ್‌ಗಳು ವಶಕ್ಕೆ, ವಾರಸುದಾರರಿಗೆ ಹಸ್ತಾಂತರ - ಈಟಿವಿ ಭಾರತ್ ಕನ್ನಡ ಸುದ್ದಿ

ಕಳೆದು ಹೋಗಿದ್ದ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ 130 ಮೊಬೈಲ್ ಫೋನ್‌​ಗಳನ್ನು ದಾವಣಗೆರೆ ಪೊಲೀಸರು ವಶಕ್ಕೆ ಪಡೆದು ವಾರಸುದಾರರಿಗೆ ಹಸ್ತಾಂತರಿಸಿದರು.

20 ಲಕ್ಷ ಮೌಲ್ಯದ 130 ಮೊಬೈಲ್‌ಗಳ ವಶ
20 ಲಕ್ಷ ಮೌಲ್ಯದ 130 ಮೊಬೈಲ್‌ಗಳ ವಶ

By ETV Bharat Karnataka Team

Published : Oct 26, 2023, 9:29 PM IST

ಎಸ್ಪಿ ಉಮಾ ಪ್ರಶಾಂತ್ ಅವರು ಪ್ರಕರಣದ ಕುರಿತು ಮಾಹಿತಿ ನೀಡಿದರು

ದಾವಣಗೆರೆ:ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡವರು ನಿರಾಳರಾಗಿದ್ದಾರೆ. ಪೊಲೀಸ್ ಇಲಾಖೆ ಕಳೆದುಕೊಂಡ ಫೋನ್‌ಗಳನ್ನು ಹುಡುಕಿಕೊಟ್ಟಿದೆ. ಇದಕ್ಕೆ CEIR ಪೋರ್ಟಲ್ ಪೊಲೀಸ್ ಅಧಿಕಾರಿಗಳಿಗೆ ಸಹಕಾರಿಯಾಗಿದೆ. ಈ ಮೂಲಕ ಸುಮಾರು 20 ಲಕ್ಷ ರೂ ಮೌಲ್ಯದ 130 ಮೊಬೈಲ್‌ಗಳನ್ನು ವಶಕ್ಕೆ ಪಡೆದ ಪೊಲೀಸರು ವಾರಸುದಾರರಿಗೆ ಒಪ್ಪಿಸಿದ್ದಾರೆ.

ಸಾರ್ವಜನಿಕರಿಗೆ ಅವಶ್ಯಕವಾದ ವಸ್ತು ಎಂದರೆ ಅದು ಮೊಬೈಲ್. ಪ್ರತಿಯೊಂದು ಕೆಲಸ ಆಗ್ಬೇಕಾದ್ರೂ ಕೈಯಲ್ಲಿ ಮೊಬೈಲ್ ಬೇಕಿರುವ ಜಮಾನ ಇದು. ಆ ಮೊಬೈಲ್ ಒಂದು ವೇಳೆ ಕಳೆದು ಹೋದಲ್ಲಿ ಇಡೀ ಪ್ರಪಂಚವೇ ಮುಳುಗಿರುವ ಭಯ ಜನರನ್ನು ಆವರಿಸಿಕೊಳ್ಳುತ್ತದೆ. ‌ಆದರೆ ಕಳೆದುಹೋದ ಅಥವಾ ಕಳ್ಳತನವಾದ ಮೊಬೈಲ್​ಗಳನ್ನು ದಾವಣಗೆರೆ ಪೊಲೀಸರು ಸುಲಭವಾಗಿ ಪತ್ತೆ ಹಚ್ಚಿ ಆಯಾ ವಾರಸುದಾರರಿಗೆ ಹಸ್ತಾಂತರ ಮಾಡಿದ್ದು ಜನರಲ್ಲಿ ಸಂತಸ ಉಂಟುಮಾಡಿದೆ.

CEIR (Central Equipment Identity Register) ಪೋರ್ಟಲ್ ಮೂಲಕ ಜನರ ಮೊಬೈಲ್ ಫೋನ್‌​ಗಳನ್ನು ಪತ್ತೆ ಹಚ್ಚಿ ಅವರ ಕೈ ಸೇರುವಂತೆ ಪೊಲೀಸರು ಮಾಡಿದ್ದಾರೆ. ಕಳುವಾದ, ಸುಲಿಗೆಯಾದ, ಕಾಣೆಯಾದ ಮೊಬೈಲ್​ಗಳ ಬ್ಲಾಕ್ ಮಾಡಲು ಕೇಂದ್ರ ಟೆಲಿ ಕಮ್ಯುನಿಕೇಶನ್ ಇಲಾಖೆಯಿಂದ ಜಾರಿಗೆ ತಂದಿರುವ ನೂತನ ವ್ಯವಸ್ಥೆ ಈ ಪೋರ್ಟಲ್​ನಲ್ಲಿದ್ದರಿಂದ ತನಿಖೆಗೆ ಸಹಕಾರಿಯಾಗಿದೆ.

ಜನರು ಮೊಬೈಲ್ ಕಳೆದುಕೊಂಡು ಈ CEIR ಪೋರ್ಟಲ್​ಗೆ ಭೇಟಿ ನೀಡಿ, ತಮ್ಮ ಮೊಬೈಲ್​ನ ಸಂಪೂರ್ಣ ಮಾಹಿತಿ ನೀಡಿ ನೋಂದಾಯಿಸಿ, ತಮ್ಮ ಮೊಬೈಲ್​ ಅನ್ನು ಬ್ಲಾಕ್ ಮಾಡಿದ್ದರು. ಬಳಿಕ ತಮ್ಮ ಕೆಲಸ ಶುರು ಮಾಡಿದ ದಾವಣಗೆರೆ ಪೊಲೀಸರು ನೂತನ CEIR ವೆಬ್ ಪೋರ್ಟಲ್ ಮೂಲಕ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಮೊಬೈಲ್​ಗಳನ್ನು ಪತ್ತೆ ಮಾಡಿದ್ದಾರೆ. ನೂತನ CEIR ವೆಬ್ ಪೋರ್ಟಲ್ ಮೂಲಕ ಸುಮಾರು 20,00,000 ಮೌಲ್ಯದ ವಿವಿಧ ಕಂಪನಿಯ 130 ಮೊಬೈಲ್​ಗಳನ್ನು ವಶಕ್ಕೆ ಒಡೆದು ವಾರಸುದಾರರಿಗೆ ಹಿಂದಿರುಗಿಸಿದ್ದಾರೆ.

CEIR ಪೋರ್ಟಲ್ ಮೂಲಕ ದಾವಣಗೆರೆ ಜಿಲ್ಲೆಯಲ್ಲಿ ಮಾರ್ಚ್‌ ತಿಂಗಳಿಂದ ಪ್ರಸ್ತುತ ತಿಂಗಳಿನವರೆಗೆ ಒಟ್ಟು 3,290 ಮೊಬೈಲ್​ಗಳನ್ನು ಬ್ಲಾಕ್ ಮಾಡಲಾಗಿದೆ. ಅವುಗಳಲ್ಲಿ 500 ಮೊಬೈಲ್​ಗಳನ್ನು ಪತ್ತೆ ಮಾಡಲಾಗಿದೆ. ಇದಲ್ಲದೆ ಈಗಾಗಲೇ 100 ಮೊಬೈಲ್​ಗಳನ್ನು ಮೊಬೈಲ್‌ ವಾರಸುದಾರರಿಗೆ ಹಿಂತಿರುಗಿಸಲಾಗಿದೆ ಎಂದು ಪೊಲೀಸ್​ ಇಲಾಖೆ ಪ್ರಕಟಣೆ ಹೊರಡಿಸಿದೆ. ಸಾರ್ವಜನಿಕರು ತಮ್ಮ ಮೊಬೈಲ್ ಕಳುವು, ಸುಲಿಗೆ ಅಥವಾ ಕಾಣೆಯಾಗಿದ್ದಲ್ಲಿ ಕೂಡಲೇ ನೂತನ CEIR ವೆಬ್ ಪೋರ್ಟಲ್​ಗೆ ಭೇಟಿ ನೀಡಿ ನೋಂದಾಯಿಸಲು ಹಾಗೂ ಇದರ ಸದುಪಯೋಗ ಪಡೆದುಕೊಳ್ಳಲು ಮನವಿ ಮಾಡಲಾಗಿದೆ.

ಎಸ್ಪಿ ಉಮಾಪ್ರಶಾಂತ್ ಪ್ರತಿಕ್ರಿಯೆ:ಎಸ್ಪಿ ಉಮಾ ಪ್ರಶಾಂತ್ ಪ್ರತಿಕ್ರಿಯಿಸಿ, "CEIR ವೆಬ್ ಪೋರ್ಟಲ್‌ನಲ್ಲಿ ಮೊಬೈಲ್ ಕಳೆದುಕೊಂಡವರು ಅವರೇ ಮಾಹಿತಿ ನಮೂದಿಸಿ ಪ್ರಕರಣ ದಾಖಲಿಸಿದ್ದರು. ಕಳೆದು ಹೋದ ಮೊಬೈಲ್​ನಲ್ಲಿ ಕೆಲವರು ಸಿಮ್ ಹಾಕಿ ಉಪಯೋಗಿಸಿದ ಬೆನ್ನಲ್ಲೇ ಅಲ್ಲಿಂದ ಸಂದೇಶ ಬರುವುದರಿಂದ ನಿಮ್ಮ ಮೊಬೈಲ್ ಉಪಯೋಗಿಸಲಾಗುತ್ತಿದೆ ಎಂದು ನೊಟೀಸ್ ಕೂಡಾ ಬರುತ್ತದೆ. ಈ ವೇಳೆ ಮೊಬೈಲ್ ಬ್ಲಾಕ್ ಮಾಡಬಹುದು. ನಮ್ಮ ಸಿಬ್ಬಂದಿ ಲೊಕೇಷನ್​ ಟ್ರೇಸ್ ಮಾಡಿ ಮೊಬೈಲ್ ವಶಕ್ಕೆ ಪಡೆಯಬಹುದು".

"ಈ ಪೋರ್ಟಲ್ ಫೆ. 2023 ರಿಂದ ಆರಂಭವಾಗಿದೆ. ಇದರ ಸಹಾಯದಿಂದ 3293 ಮೊಬೈಲ್ ಬ್ಲಾಕ್ ಮಾಡಿದ್ದೇವೆ. ಇದರಲ್ಲಿ 520 ಮೊಬೈಲ್ ಪತ್ತೆಯಾಗಿವೆ. 390 ಮೊಬೈಲ್​ಗಳನ್ನು ವಾರಸುದಾರರಿಗೆ ಹಸ್ತಾಂತರ ಮಾಡಿದ್ದೇವೆ. ಇಂದು 130 ಮೊಬೈಲ್ ವಾರಸುದಾರರಿಗೆ ಹಸ್ತಾಂತರ ಮಾಡ್ತಿದ್ದೇವೆ. ಇಲ್ಲಿ ತನಕ ಇಡೀ ದೇಶದಲ್ಲಿ 9,74,088 ಮೊಬೈಲ್​ಗಳನ್ನು ಬೇರೆ ಬೇರೆ ರಾಜ್ಯದ ಪೊಲೀಸ್​ ಇಲಾಖೆ ಸಿಬ್ಬಂದಿ ಬ್ಲಾಕ್ ಮಾಡಿದ್ದಾರೆ. 4,11,969 ಮೊಬೈಲ್ ಸಿಕ್ಕಿದ್ದು, ಇದರಲ್ಲಿ 1,52,932 ಮೊಬೈಲ್​ಗಳನ್ನು ನಮ್ಮ ರಾಜ್ಯ ಬ್ಲಾಕ್ ಮಾಡುವಲ್ಲಿ ಮೊದಲ ಸ್ಥಾನದಲ್ಲಿದೆ'' ಎಂದರು.

ಇದನ್ನೂ ಓದಿ:ಮೊಬೈಲ್ ಕಳವು ನಡೆದರೆ ಎಫ್ಐಆರ್ ಕಡ್ಡಾಯ: ಬೆಂಗಳೂರು ಪೊಲೀಸ್​ ಕಮಿಷನರ್ ಖಡಕ್ ಸೂಚನೆ

ABOUT THE AUTHOR

...view details