ಕರ್ನಾಟಕ

karnataka

"ಟೈಂ ಕೊಟ್ಟಿದ್ದೇವೆ, ಅದ್ಯಾವ ಬಾಂಬ್ ಸಿಡಿಸುತ್ತಾರೋ ಸಿಡಿಸಲಿ": ಡಿಸಿಎಂ ಅಶ್ವತ್ಥ ನಾರಾಯಣ

By

Published : Sep 12, 2020, 8:49 PM IST

ಏನನ್ನು ಬೇಕಾದರೂ ಸಿಡಿಸಲು ಜಮೀರ್​ಗೆ ಸ್ವಾತಂತ್ರ್ಯ ಇದೆ.‌ ಹೆದರಿಸುವ, ಬ್ಲಾಕ್‌ ಮೇಲ್ ಪ್ರಯತ್ನ ನಡೆಯಲ್ಲ. ಈ ರೀತಿ ಹೇಳಿಕೆಗಳು ಬ್ಲಾಕ್ ಮೇಲ್ ತಂತ್ರವಲ್ಲದೇ ಮತ್ತೇನು? ಬೆದರಿಕೆ‌ಗೆ ನಾವು ಬಗ್ಗಲ್ಲ, ನಮ್ಮಲ್ಲಿ ನಡೆಯಲ್ಲ. ತಪ್ಪಿತಸ್ಥರ ರಕ್ಷಣೆ ಮಾಡಲು, ತಪ್ಪಿಸಿಕೊಳ್ಳುವ ಪ್ರಯತ್ನ ಇದು ಎಂದು ಶಾಸಕ ಜಮೀರ್ ಅಹಮದ್ ವಿರುದ್ಧ ಡಿಸಿಎಂ ಅಶ್ವತ್ಥ್ ನಾರಾಯಣ್ ಕಿಡಿಕಾರಿದ್ದಾರೆ.

Ashwath Narayan
ಅಶ್ವತ್ಥ್ ನಾರಾಯಣ್

ದಾವಣಗೆರೆ:ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್​ಗೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಯಾವ ಬಾಂಬ್ ಬೇಕಾದರೂ ಸಿಡಿಸಲಿ. ನಾವೂ ಟೈಂ ಕೊಟ್ಟಿದ್ದೇವೆ. ಏನ್ ಸಿಡಿಸುತ್ತಾರೋ ಸಿಡಿಸಲಿ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಸವಾಲು ಹಾಕಿದ್ದಾರೆ.

ಜೆಎಂಐಟಿಯಲ್ಲಿ ಮಾತನಾಡಿದ ಅಶ್ವತ್ಥ್ ನಾರಾಯಣ್ , ಏನನ್ನು ಬೇಕಾದರೂ ಸಿಡಿಸಲು ಜಮೀರ್​ಗೆ ಸ್ವಾತಂತ್ರ್ಯ ಇದೆ.‌ ಹೆದರಿಸುವ, ಬ್ಲಾಕ್‌ ಮೇಲ್ ಪ್ರಯತ್ನ ನಡೆಯಲ್ಲ. ಈ ರೀತಿ ಹೇಳಿಕೆಗಳು ಬ್ಲಾಕ್ ಮೇಲ್ ತಂತ್ರವಲ್ಲದೇ ಮತ್ತೇನು? ಬೆದರಿಕೆ‌ಗೆ ನಾವು ಬಗ್ಗಲ್ಲ, ನಮ್ಮಲ್ಲಿ ನಡೆಯಲ್ಲ. ತಪ್ಪಿತಸ್ಥರ ರಕ್ಷಣೆ ಮಾಡಲು, ತಪ್ಪಿಸಿಕೊಳ್ಳುವ ಪ್ರಯತ್ನ ಇದು ಎಂದು ಕಿಡಿಕಾರಿದರು.

ಡಿಸಿಎಂ ಅಶ್ವತ್ಥ್ ನಾರಾಯಣ್

ಒಳ್ಳೆಯ ಉದ್ದೇಶ ಇಟ್ಟುಕೊಂಡವರು ಹೀಗೆ ಮಾತನಾಡಲ್ಲ. ಎಲ್ಲಾ ಬೆಳವಣಿಗೆ ಗಮನಿಸಿದರೆ ಜಮೀರ್ ಬ್ಲಾಕ್ ಮೇಲರ್ ಅನಿಸುತ್ತೆ. ಅದೇನೂ ಅಂತಾ ಸಿಡಿಸಲಿ, ಕಾಯುವುದ್ಯಾಕೆ. ರಾಜ್ಯಕ್ಕೆ ಒಳ್ಳೆಯದು ಆಗುವುದಾದರೆ ಸಿಡಿಸಲಿ, ನಾವೇನೂ ಬೇಡ ಎಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಮೀರ್ ಅಹಮದ್ ತುಂಬಾನೇ ಅರ್ಜೆಂಟ್ ನಲ್ಲಿದ್ದಾರೆ. ನ್ಯಾಯ ಬರುತ್ತೆ, ಸತ್ಯಾಸತ್ಯತೆ ಆಚೆ ಬರುತ್ತದೆ. ಅರ್ಜೆಂಟ್ ನಲ್ಲಿ ಬ್ಲಾಕ್‌ಮೇಲ್ ಮಾಡುವಂತ ಹೇಳಿಕೆ ನೀಡುತ್ತಿದ್ದಾರೆ. ತಾಳ್ಮೆ ಕಳೆದುಕೊಂಡು ಆತಂಕ, ಭಯದಲ್ಲಿ ಹೇಳಿಕೆ ಕೊಡುತ್ತಿರುವುದು ನೋಡಿದರೆ ಜಮೀರ್ ಹಿಟ್ ವಿಕೆಟ್ ಆಗುವುದು ಖಚಿತ ಎಂದು ಭವಿಷ್ಯ ನುಡಿದರು.

ಡ್ರಗ್ಸ್ ವಿಚಾರದಲ್ಲಿ ಸ್ವತಂತ್ರ ತನಿಖೆ ನಡೆಯುತ್ತಿದೆ. ಫಿಕ್ಸ್ ಮಾಡಲು ನಾನು ಹೇಳಿದ್ರೆ ತಪ್ಪಾಗುತ್ತದೆ. ತನಿಖೆ ಆಗುತ್ತಿದ್ದು, ಸದ್ಯದಲ್ಲಿಯೇ ಎಲ್ಲಾ ಸತ್ಯಾಸತ್ಯತೆ ಹೊರ ಬರಲಿದೆ. ಅಲ್ಲಿಯವರೆಗೆ ಕಾಯೋಣ ಎಂದರು.

ABOUT THE AUTHOR

...view details