ಕರ್ನಾಟಕ

karnataka

ETV Bharat / state

4ನೇ ಬಾರಿ ಸಂಸತ್​ ಬಾಗಿಲು ತಟ್ಟಿದ ಜಿಎಂ ಸಿದ್ದೇಶ್ವರ: ಕಾರ್ಯಕರ್ತರ ವಿಜಯೋತ್ಸವ - Davanagere

ನಾಲ್ಕನೇ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗುವ ಮೂಲಕ ಬಿಜೆಪಿ ಹಿರಿಯ ಮುಖಂಡ ಜಿ.ಎಂ. ಸಿದ್ದೇಶ್ವರ ತಮ್ಮ ವಿರುದ್ಧ ಸರಿಸಾಟಿಯಾಗಿ ನಿಲ್ಲುವವರು ಯಾರೂ ಇಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ.

ಸಂಗ್ರಹ ಚಿತ್ರ

By

Published : May 24, 2019, 10:54 AM IST

ದಾವಣಗೆರೆ: ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ್​ ಅವರು ತಮ್ಮ ಪ್ರತಿಸ್ಪರ್ಧಿ ಹೆಚ್​.ಬಿ. ಮಂಜಪ್ಪ ವಿರುದ್ಧ ಗೆಲುವು ಸಾಧಿಸುವ ಮೂಲಕ ನಾಲ್ಕನೇ ಬಾರಿ ಸಂಸತ್​ ಬಾಗಿಲು ತಟ್ಟಿದ್ದಾರೆ. ಇದು ಅತ್ಯದ್ಭುತ ಗೆಲುವು ಎಂದು ಜಗಳೂರು ಶಾಸಕ ಎಸ್​.ವಿ. ರಾಮಚಂದ್ರಪ್ಪ ಸಂತಸ ವ್ಯಕ್ತಪಡಿಸಿದರು.

ಜಿಎಂ ಸಿದ್ದೇಶ್ವರ್​ ಅವರು ಲೋಕಸಭೆಗೆ ನಾಲ್ಕನೇ ಬಾರಿ ಪುನರಾಯ್ಕೆಯಾದ ನಿಮಿತ್ತ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ವಿಜಯೋತ್ಸವ ಆಚರಿಸಿದರು.

ಈಟಿವಿ ಭಾರತ್​ ಜೊತೆ ಮಾತನಾಡಿದ ಅವರು, ಮೋದಿಯವರ ಅಭಿವೃದ್ಧಿ ಕೆಲಸಗಳು ಹಾಗೂ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಮಾಡಿದ್ದ ಕಾರ್ಯಗಳಿಂದ ಬಿಜೆಪಿ ಮತ್ತೆ ಗೆಲುವು ಸಾಧಿಸಿದೆ. ಸಿದ್ದೇಶ್ವರ್ ಅವರು ಮತ್ತೊಮ್ಮೆ ಗೆಲ್ಲುವುದು ಅವಶ್ಯವಾಗಿತ್ತು. ಇಬ್ಬರು ಸೇರಿ ಜಗಳೂರು ತಾಲೂಕು ಅಭಿವೃದ್ಧಿಗೆ ಪಣ ತೊಡುತ್ತೇವೆ ಎಂದು ವಾಗ್ಧಾನ ಮಾಡಿದರು.

ಇನ್ನು ಜಿ.ಎಂ. ಸಿದ್ದೇಶ್ವರ್​ ಅವರು ಲೋಕಸಭೆಗೆ ಪುನರಾಯ್ಕೆಯಾದ ಪ್ರಯುಕ್ತ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ವಿಜಯೋತ್ಸವ ಆಚರಿಸಿದರು.

ABOUT THE AUTHOR

...view details