ಕರ್ನಾಟಕ

karnataka

ETV Bharat / state

ಮೊದಲು ಕಣ್ಣೀರು ಮುಕ್ತ ಕರ್ನಾಟಕ ಆಗಬೇಕು: ಆಯನೂರು ಲೇವಡಿ

ಕಣ್ಣೀರಿನ ರಾಜಕಾರಣ ಮಾಡುವ ದೇವೇಗೌಡ ಕುಟುಂಬದಿಂದ ಕರ್ನಾಟಕ ಕಣ್ಣೀರು ಮುಕ್ತ ಆಗಬೇಕೆಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಲೇವಡಿ‌ ಮಾಡಿದ್ದಾರೆ.

ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್

By

Published : Mar 17, 2019, 5:14 PM IST

ದಾವಣಗೆರೆ:ದೇವೇಗೌಡರ ಕುಟುಂಬದಲ್ಲಿ ಯಾವುದೇ ಕಾರಣಕ್ಕೂ ಕಣ್ಣೀರು ಬತ್ತಲ್ಲ. ಹೀಗಾಗಿ ಕಾಂಗ್ರೆಸ್ ಮುಕ್ತ ಭಾರತ ಜೊತೆಗೆ ಕಣ್ಣೀರು ಮುಕ್ತ ಕರ್ನಾಟಕ ಕೂಡ ಅವಶ್ಯಕತೆ ಇದೆ ಎಂದು ದಾವಣಗೆರೆಯಲ್ಲಿ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಲೇವಡಿ‌ ಮಾಡಿದರು.

ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್

ನಗರದ ರೇಣುಕಾ ಮಂದಿರದಲ್ಲಿ‌ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಆಯನೂರು, ಮೊನ್ನೆ ಹಾಸನದಲ್ಲಿ ಇಡೀ ಕುಟುಂಬ ಕಣ್ಣೀರಧಾರೆ ಹರಿಸಿದ್ದಾರೆ. ಅಪ್ಪ, ಮಕ್ಕಳಲ್ಲಿ ಕಣ್ಣೀರು ಬತ್ತುವುದಿಲ್ಲ, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಣ್ಣೀರು ಮುಕ್ತ ಕರ್ನಾಟಕ ಆಗಬೇಕಿದೆ ಎಂದು ವ್ಯಂಗವಾಡಿದರು.

ನಾನು ಸತ್ತುಹೋಗುತ್ತೇನೆ ಓಟು ಕೊಡಿ ಎಂದು ಕೇಳಿದ ದೇಶದ ಮೊದಲಿಗ ಕುಮಾರಸ್ವಾಮಿ, ಇನ್ನು ದೇವೇಗೌಡರು ಹಾಸನದಲ್ಲಿ ಅರವತ್ತು ವರ್ಷದಿಂದ ರಾಜಕೀಯದಲ್ಲಿದ್ದೀರಿ ಆದರೆ ಕುಟುಂಬ ಭಾಂಧವ್ಯ ಬಿಟ್ಟು ರಾಜಕೀಯದತ್ತ ನೋಡುತ್ತೇನೆ ಎಂದ ನೀವು ಎಲ್ಲಿ ಭಾಂಧವ್ಯ ಬಿಟ್ಟಿದ್ದೀರಿ ಮತ್ತೆ ನಿಮ್ಮ ಮಗನನ್ನು, ಮೊಮ್ಮಗನ್ನು ತಂದು ಕೂರಿಸಿದ್ದೀರಿ, ಅರವತ್ತು ವರ್ಷದಲ್ಲಿ ಒಬ್ಬನೇ ಒಬ್ಬ ಕಾರ್ಯಕರ್ತನನ್ನು ಹಾಸದಲ್ಲಿ ಬೆಳೆಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details