ಕರ್ನಾಟಕ

karnataka

ETV Bharat / state

ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಫೈರ್ ಆಫೀಸರ್

ಚಿತ್ರಮಂದಿರಕ್ಕೆ ಫೈರ್ ಸೇಫ್ಟಿ ಸಂಬಂಧ ಎನ್‌ಒಸಿ ನೀಡಲು ಫೈರ್​ ಆಫೀಸರ್​ ಸುಹಾಸ್ ಎಂಬವರು​ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಫೈರ್ ಆಫೀಸರ್
ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಫೈರ್ ಆಫೀಸರ್

By

Published : Jan 3, 2023, 11:05 AM IST

ದಾವಣಗೆರೆ:ಫೈರ್ ಆಫೀಸರ್ ಒಬ್ಬರು ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಜಿಲ್ಲೆಯ ಹರಿಹರ ತಾಲೂಕಿನ ಸುಹಾಸ್ ಲೋಕಾಯುಕ್ತ ಬಲೆಗೆ ಬಿದ್ದವರು. ಹಣ ಪಡೆಯುವಾಗ ಟ್ರ್ಯಾಪ್ ಮಾಡಿದ ತನಿಖಾಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಎನ್ಒಸಿ ನೀಡಲು ಲಂಚಕ್ಕೆ ಬೇಡಿಕೆ:ಹರಿಹರ ತಾಲೂಕಿನ ಮಲೇಬೆನ್ನೂರು ಗ್ರಾಮದ ಅರುಣ ಎಂಬವರು ಚಿತ್ರಮಂದಿರಕ್ಕೆ ಫೈರ್ ಸೇಫ್ಟಿ ಸಂಬಂಧ ಎನ್‌ಒಸಿ ನೀಡಲು ಸುಹಾಸ್ ಅವರಿಗೆ ಅರ್ಜಿ ಸಲ್ಲಿಸಿದ್ದರು. ಫೈರ್ ಸೇಫ್ಟಿಎನ್‌ಒಸಿಗೆ ಆರೋಪಿತ ಅಧಿಕಾರಿ 8,000 ಸಾವಿರ ರೂ ಕೇಳಿದ್ದಾರೆ ಎನ್ನಲಾಗ್ತಿದೆ. ಅಂತಿಮವಾಗಿ 5,000 ರೂ ಕೊಡಲು ಚಿತ್ರಮಂದಿರದ ಅರುಣ ಒಪ್ಪಿಕೊಂಡಿದ್ದರು. ಈ ಸಂದರ್ಭದಲ್ಲಿ ಲೋಕಾಯುಕ್ತರು ಕಾರ್ಯಾಚರಣೆ ನಡೆಸಿದ್ದಾರೆ.

ಇದನ್ನೂ ಓದಿ:ಠಾಣೆಯಲ್ಲಿ ಲಂಚ ಪಡೆಯುವಾಗ ಎಸಿಬಿ ದಾಳಿ: ಬಲೆಗೆ ಬಿದ್ದ ಪಿಎಸ್​ಐ, ಹೆಡ್ ಕಾನ್ಸ್​ಟೇಬಲ್​​

ABOUT THE AUTHOR

...view details