ದಾವಣಗೆರೆ:ಲಾಕ್ಡೌನ್ ಹಿನ್ನೆಲೆ ಸಂಕಷ್ಟಕ್ಕೊಳಗಾಗಿದ್ದ ಬ್ಯೂಟಿಷಿಯನ್ಗಳ ಕುರಿತು "ಈಟಿವಿ ಭಾರತ' ವರದಿ ಪ್ರಸಾರ ಮಾಡಿದ ಬಳಿಕ ನೆರವು ಸಿಕ್ಕಿದೆ.
ಕಳೆದ ಎರಡು ತಿಂಗಳಿಂದ ಯಾರ ಸಹಾಯ ಇಲ್ಲದೆ ಕಂಗೆಟ್ಟಿದ್ದ ನೂರಾರು ಬ್ಯೂಟಿಷಿಯನ್ಗಳಿಗೆ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನೆರವು ನೀಡಿದ್ದಾರೆ. "ಸೌಂದರ್ಯ ಪ್ರಜ್ಞೆ ಮರೆತ ಜನ... ಬ್ಯೂಟಿಷಿಯನ್ಗಳ ಬದುಕು ಕಿತ್ತುಕೊಂಡ ಕೊರೊನಾ' ಎಂಬ ವಿಶೇಷ ವರದಿ ಪ್ರಸಾರ ಮಾಡಿತ್ತು. ಬಳಿಕ ನಮಗೆ ಸಹಾಯ ದೊರಕಿದ್ದು "ಈಟಿವಿ ಭಾರತ' ಕ್ಕೆ ಧನ್ಯವಾದಗಳು ಎಂದಿದ್ದಾರೆ.
ಸಂಕಷ್ಟದ ಸಮಯದಲ್ಲಿ ಬ್ಯೂಟಿಷಿಯನ್ಗಳಿಗೆ ಸಿಕ್ತು ನೆರವು...ಇದು ಈಟಿವಿ ಭಾರತ್ ಇಂಪ್ಯಾಕ್ಟ್ - Assistance to beauticians in times of distress at Davanagere
ಜಿಲ್ಲಾ ಬ್ಯೂಟಿಪಾರ್ಲರ್ಸ್ ಅಸೋಸಿಯೇಷನ್ ನ 103 ಸದಸ್ಯರಿಗೆ ಮಾಜಿ ಸಚಿವ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರು ಆಹಾರದ ಕಿಟ್ಗಳನ್ನು ನೀಡಿದರು.
ಸಂಕಷ್ಟದ ಸಮಯದಲ್ಲಿ ಬ್ಯೂಟಿಷಿಯನ್ಗಳಿಗೆ ಸಿಕ್ತು ನೆರವು