ಕರ್ನಾಟಕ

karnataka

ETV Bharat / state

ನಾವು ಬಿಜೆಪಿ ಮನೆಯ ಸೊಸೆಯರಿದ್ದಂತೆ, ಸೊಸೆ ಈಗ ಮನೆ ಮಗಳಾಗಿದ್ದಾಳೆ: ಬಿ.ಸಿ.ಪಾಟೀಲ್

ನಾವು ಪಕ್ಷಕ್ಕೆ ಸೇರಿದ ಮೇಲೆ ಮನೆಗೆ ಬಂದ ಸೊಸೆಯಿದ್ದಂತೆ, ಸೊಸೆಯಾಗಿ ಮನೆ ಸೇರಿದ ಮೇಲೆ ಮನೆ ಮಗಳಾಗುತ್ತಾಳೆ. ಬಿಜೆಪಿಯಲ್ಲಿ ನಮಗೆ ಯಾವುದೇ ಅನಿಶ್ಚಿತತೆ ಇಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

b.c.patil
ಬಿ.ಸಿ.ಪಾಟೀಲ್

By

Published : Jun 8, 2021, 2:25 PM IST

ದಾವಣಗೆರೆ:ನಾವು 17 ಜನರು ಯಡಿಯೂರಪ್ಪ ಅವರನ್ನು‌ ನಂಬಿ‌ ಬಂದಿದ್ದೇವೆ. ಬಿಜೆಪಿಯಲ್ಲಿರುವ ಬಹುತೇಕರು ಬೇರೆ ಪಕ್ಷದಿಂದ ಬಂದವರು. ಪಕ್ಷಕ್ಕೆ ಸೇರಿದ ಮೇಲೆ ಮೂಲ‌ ಹಾಗೂ ವಲಸಿಗರು ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.

ದಾವಣಗೆರೆಯಲ್ಲಿ ಮಾತನಾಡಿದ ಅವರು, ನಾವು ಪಕ್ಷಕ್ಕೆ ಸೇರಿದ ಮೇಲೆ ಮನೆಗೆ ಬಂದ ಸೊಸೆಯಿದ್ದಂತೆ, ಸೊಸೆಯಾಗಿ ಮನೆ ಸೇರಿದ ಮೇಲೆ ಮನೆ ಮಗಳಾಗುತ್ತಾಳೆ. ಬಿಜೆಪಿಯಲ್ಲಿ ನಮಗೆ ಯಾವುದೇ ಅನಿಶ್ಚಿತತೆ ಇಲ್ಲ. ಸಿಎಂ ಬದಲಾವಣೆ ಪ್ರಶ್ನೆಯೇ ಉದ್ಭವಿಸಲ್ಲ ಎಂದರು. ಐದು ಬೆರಳುಗಳೂ‌ ಸಮನಾಗಿರಲ್ಲ. ಒಂದು ಮನೆ ಅಂದ ಮೇಲೆ ಹಲವಾರು‌ ವ್ಯತ್ಯಾಸ, ಮನಸ್ತಾಪಗಳು ಇರುತ್ತವೆ ಎಂದರು.

ಇದನ್ನೂ ಓದಿ:ಬಿಜೆಪಿಯಲ್ಲಿ ನಿಲ್ಲದ ಅಸಮಾಧಾನದ ಹೊಗೆ: ಶಾಸಕಾಂಗ ಪಕ್ಷದ ಸಭೆ ಕರೆಯಲು ಶಾಸಕ ಸುನೀಲ್ ಕುಮಾರ್ ಒತ್ತಾಯ

ಮಾಧ್ಯಮಗಳ ಪ್ರಶ್ನೆಗಳಿಂದ ರೋಸಿ ಹೋದ ಸಿಎಂ ಈ ರೀತಿ ಹೇಳಿಕೆ ನೀಡಿರಬಹುದು. ಅವರೇನು ತಪ್ಪು ಹೇಳಿಕೆ ನೀಡಿಲ್ಲ. ನಾವು ಪಕ್ಷದ ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ಸಿಎಂ ಪರ ಕೃಷಿ‌ ಸಚಿವ ಬಿ.ಸಿ. ಪಾಟೀಲ್ ಬ್ಯಾಟಿಂಗ್ ಮಾಡಿದರು.

ABOUT THE AUTHOR

...view details