ಕರ್ನಾಟಕ

karnataka

ETV Bharat / state

ಬಸ್​​​ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಎಬಿವಿಪಿ ವತಿಯಿಂದ ಪ್ರತಿಭಟನೆ

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ವಿವಿಧ ಗ್ರಾಮಗಳಿಂದ ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳು ಶೈಕ್ಷಣಿಕ ಉದ್ದೇಶಕ್ಕಾಗಿ ನಗರಕ್ಕೆ ಆಗಮಿಸುತ್ತಾರೆ. ಆದ್ರೆ ಸೂಕ್ತ ಬಸ್​​ ಸೌಲಭ್ಯವಿಲ್ಲದ ಕಾರಣ ಪರದಾಡುವ ಪರಿಸ್ಥಿತಿ ಇದೆ. ಹಾಗಾಗಿ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಎಬಿವಿಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಎಬಿವಿಪಿ ವತಿಯಿಂದ ಪ್ರತಿಭಟನೆ

By

Published : Oct 2, 2019, 6:00 PM IST

ದಾವಣಗೆರೆ: ಹರಿಹರ ತಾಲೂಕಿನ ವಿವಿಧ ಗ್ರಾಮಗಳಿಗೆ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಎಬಿವಿಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಬಳಿಕ ಕೆಎಸ್ಆರ್​ಟಿಸಿ ಘಟಕ ವ್ಯವಸ್ಥಾಪಕ ಮರುಳುಸಿದ್ದಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ವಿವಿಧ ಗ್ರಾಮಗಳಿಂದ ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳು ಶೈಕ್ಷಣಿಕ ಉದ್ದೇಶಕ್ಕಾಗಿ ನಗರಕ್ಕೆ ಆಗಮಿಸುತ್ತಾರೆ. ಇವರಿಗೆ ಸೂಕ್ತ ಬಸ್ ಸೌಲಭ್ಯ ಇಲ್ಲದೇ ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಎಬಿವಿಪಿ ವತಿಯಿಂದ ಪ್ರತಿಭಟನೆ

ಹರಿಹರದಿಂದ ಬೈಪಾಸ್, ಹನಗವಾಡಿ, ಹರಗನಹಳ್ಳಿ, ರಾಜನಹಳ್ಳಿ ಕ್ರಾಸ್, ಹಲಸಬಾಳು, ಕುಮಾರಪಟಣಂ ಮೂಲಕ ಹರಿಹರಕ್ಕೆ ಬರಲು ಸರ್ಕಾರಿ ಸಿಟಿ ಬಸ್ ಸೌಲಭ್ಯ ಮತ್ತು ಉಕ್ಕಡಗಾತ್ರಿ, ಸಾರಥಿ, ಬನ್ನಿಕೋಡು ಗ್ರಾಮದ ಮೂಲಕ ಬರುವ ಬಸ್​​ಗಳು ನಿಗದಿಗಿಂತ ಹೆಚ್ಚು ಪ್ರಮಾಣದಲ್ಲಿ ವಿದ್ಯಾರ್ಥಿಗಳನ್ನು ಕುರಿಗಳು ತುಂಬುವ ರೀತಿಯಲ್ಲಿ ತುಂಬುತ್ತಿವೆ. ಕೂಡಲೇ ಅವಶ್ಯಕತೆ ಇರುವ ಸ್ಥಳಗಳಿಗೆ ಬಸ್ ಸೌಲಭ್ಯ ನೀಡುವಂತೆ ಪ್ರತಿಭಟಿಸಿ, ಮನವಿ ನೀಡಿದರು.

ABOUT THE AUTHOR

...view details