ದಾವಣಗೆರೆ: ಜಿಲ್ಲೆಯಲ್ಲಿ 240 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 11,637ಕ್ಕೇರಿದೆ.
ದಾವಣಗೆರೆಯಲ್ಲಿ 240 ಕೊರೊನಾ ಪಾಸಿಟಿವ್: ಇಬ್ಬರು ಸಾವು - ದಾವಣಗೆರೆ ಕೊರೊನಾ
ದಾವಣಗೆರೆ ಜಿಲ್ಲೆಯಲ್ಲಿ ಇಂದು 240 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 11,637ಕ್ಕೇರಿದೆ.
ಇಬ್ಬರು ಕೊರೊನಾ ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದು, 218 ಜನರು ಈ ಹೆಮ್ಮಾರಿಗೆ ಇದುವರೆಗೆ ಬಲಿಯಾಗಿದ್ದಾರೆ. ಶಾಮನೂರು ರಸ್ತೆಯ ಬಳಿಯ ವಾಸಿ 40 ವರ್ಷದ ಪುರುಷ ಸೆಪ್ಟೆಂಬರ್ 2 ಹಾಗೂ ವಿನೋಬನಗರದ 46 ವರ್ಷದ ಪುರುಷ ಸೆ. 6ರಂದು ಕೊರೊನಾ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ.
ದಾವಣಗೆರೆಯಲ್ಲಿ 88, ಹರಿಹರ 41, ಜಗಳೂರು 15, ಚನ್ನಗಿರಿ 45, ಹೊನ್ನಾಳಿ 43 ಹಾಗೂ ಹೊರ ಜಿಲ್ಲೆಯಿಂದ ಬಂದಿದ್ದ 8 ಮಂದಿಯಲ್ಲಿ ಸೋಂಕಿರುವುದು ಖಚಿತವಾಗಿದೆ. 198 ಜನರು ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದು, ಇದುವರೆಗೆ 8564 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 2855 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರಿದಿದೆ.