ಮಂಗಳೂರು (ದ.ಕ): ನವಮಂಗಳೂರು ಬಂದರಿನಲ್ಲಿರುವ ಮಾಲಿನ್ಯ ಸ್ವಚ್ಚಗೊಳಿಸುವ ಗುತ್ತಿಗೆ ಬೋಟೊಂದರ ಪ್ರೊಫೈಲ್ಲರ್ಗೆ ಸಿಲುಕಿದ್ದ ಬಲೆ ತೆಗೆಯಲು ಹೋದ ವ್ಯಕ್ತಿಯೊಬ್ಬ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ಬೋಟಿಗೆ ಸಿಲುಕಿದ್ದ ಬಲೆ ತೆಗೆಯಲು ಸಮುದ್ರಕ್ಕಿಳಿದ ವ್ಯಕ್ತಿ ಸಾವು
ಸಮುದ್ರಕ್ಕಿಳಿಯುವ ಮುನ್ನ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳದೆ ಇರುವುದು ಘಟನೆಗೆ ಕಾರಣವಾಗಿರಬಹುದು ಎನ್ನಲಾಗಿದ್ದು, ಈ ಸಂಬಂಧ ಗುತ್ತಿಗೆದಾರ ಕಂಪನಿ ವಿರುದ್ಧ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೋಟಿಗೆ ಸಿಲುಕಿದ್ದ ಬಲೆ ತೆಗೆಯಲು ಸಮುದ್ರಕ್ಕಿಳಿದ ವ್ಯಕ್ತಿ ಸಾವು
ಬೈಕಂಪಾಡಿ ಸಮೀಪದ ಮೀನಕಳಿಯ ನಿವಾಸಿ ಪ್ರದೀಪ್(42) ಮೃತಪಟ್ಟವರು. ಮಂಗಳವಾರ ಮುಂಜಾನೆ ಬೋಟಿನ ಗುತ್ತಿಗೆದಾರ ಕಂಪನಿಯ ಸಿಬ್ಬಂದಿ ಪ್ರದೀಪ್ನನ್ನು ಬಲೆ ತೆಗೆಯಲು ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ.
ಆದರೆ ಮುಳುಗುಹಾಕುವ ಸಂದರ್ಭ ಸೂಕ್ತ ಮುನ್ನೆಚ್ಚರಿಕೆ ಹಾಗೂ ರಕ್ಷಣಾ ಸಲಕರಣೆಯ ವ್ಯವಸ್ಥೆ ನೀಡದೆ ಈ ಘಟನೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಐಪಿಸಿ ಸೆಕ್ಷನ್ ಎ304ರ ಪ್ರಕಾರ ಗುತ್ತಿಗೆದಾರ ಕಂಪನಿ ಮತ್ತಿತರರ ಮೇಲೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.