ಬೆಳ್ತಂಗಡಿ :ಕಿಂಡಿ ಅಣೆಕಟ್ಟು ಕೆಳಗಡೆ ಇರುವ ಗುಂಡಿಯಲ್ಲಿ ಯುವಕನೋರ್ವ ಮುಳುಗಿ ಮೃತಪಟ್ಟ ಘಟನೆ ವೇಣೂರು ಪೊಲೀಸ್ ಠಾಣೆಯ ಕುಕ್ಕೇಡಿ ಸಮೀಪದ ಉಮಿಲಾಯಿ ಎಂಬಲ್ಲಿ ನಡೆದಿದೆ.
ಮಾಲಾಡಿ ಗ್ರಾಮದ ಪುರಿಯ ನಿವಾಸಿ ರವೀಂದ್ರ (20) ಮೃತಪಟ್ಟ ವ್ಯಕ್ತಿ. ಇವರು ನೀರಿನಲ್ಲಿ ಸ್ನಾನ ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.