ಕರ್ನಾಟಕ

karnataka

By

Published : Feb 20, 2023, 1:40 PM IST

ETV Bharat / state

ದ.ಕ ಜಿಲ್ಲಾ ಪೊಲೀಸರಿಂದ ವಿನೂತನ ಪ್ರಯೋಗ; ಅಪರಾಧಿಗಳ ಪತ್ತೆಗೆ ಪೋರ್ಟೇಬಲ್ ಸ್ಕ್ಯಾನರ್ ಬಳಕೆ

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರಿಂದ ಹೊಸ ಪ್ರಯೋಗ- ಅಪರಾಧಿಗಳ ಪತ್ತೆಗೆ ಪೋರ್ಟೇಬಲ್ ಸ್ಕ್ಯಾನರ್ ಆರಂಭ- ರಾತ್ರಿ ಗಸ್ತು ಕರ್ತವ್ಯದ ವೇಳೆ ಬಳಕೆ

portable-scanner
ಪೋರ್ಟೇಬಲ್ ಸ್ಕ್ಯಾನರ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ವಿನೂತನ ಪ್ರಯೋಗ ಜಾರಿ ಮಾಡಲಾಗಿದ್ದು, ರಾತ್ರಿ ಗಸ್ತಿನಲ್ಲಿ ಅಪರಾಧಿಗಳ ಪತ್ತೆಗೆ ಪೋರ್ಟೇಬಲ್ ಸ್ಕ್ಯಾನರ್ ಬಳಕೆ ಆರಂಭಿಸಲಾಗಿದೆ. ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ನಡೆಯಬಹುದಾದ ಅಪರಾಧ ಕೃತ್ಯಗಳನ್ನು ತಡೆಗಟ್ಟುವ ಹಾಗೂ ಅಪರಾಧಿಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ನೂತನ ಎಂಸಿಸಿಟಿಎನ್​ಎಸ್​ ಪೋರ್ಟೇಬಲ್ ಸ್ಕ್ಯಾನರ್ ಬಳಕೆಯನ್ನು ಆರಂಭಿಸಲಾಗಿದ್ದು, ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ.

ಎಂಸಿಸಿಟಿಎನ್​ಎಸ್ ​(MCCTNS- Mobile Crime and Criminal Tracking Network System) ನೂತನ ತಂತ್ರಜ್ಞಾನದ ಸ್ಕ್ಯಾನರ್ ಅನ್ನು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ರಾತ್ರಿ ಗಸ್ತು ಕರ್ತವ್ಯದ ವೇಳೆ ಬಳಸಬೇಕಿದೆ. ರಾತ್ರಿ ವೇಳೆ ತಿರುಗಾಡುವ ಅಪರಿಚಿತ ಹಾಗೂ ಸಂಶಯಾಸ್ಪದ ವ್ಯಕ್ತಿಗಳ ಅಪರಾಧ ಹಿನ್ನೆಲೆಯ ಬಗ್ಗೆ ಈ ಹಿಂದೆ ನಡೆಸುತ್ತಿದ್ದ ಮೌಖಿಕ ವಿಚಾರಣೆಯೊಂದಿಗೆ ಯಾವುದೇ ವ್ಯಕ್ತಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರೆ, ಆತನ ಬೆರಳಚ್ಚುಗಳನ್ನು ಈ ನೂತನ ತಂತ್ರಾಂಶದ ಮೂಲಕ ಪರಿಶೀಲನೆ ಮಾಡಿ ಅಪರಾಧ ಹಿನ್ನೆಲೆಗಳ ಮಾಹಿತಿಯನ್ನು ಕ್ಷಣ ಮಾತ್ರದಲ್ಲಿ ಪಡೆಯಬಹುದಾಗಿದೆ.

ಇದನ್ನೂ ಓದಿ:ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಪ್ರಯತ್ನ.. ಕಾಲು ಜಾರಿ ಬಿದ್ದ ಪ್ರಯಾಣಿಕ.. ಪ್ರಾಣ ಉಳಿಸಿದ ಪೊಲೀಸ್​

ಇತ್ತೀಚೆಗಷ್ಟೇ ದಕ್ಷಿಣ ಕನ್ನಡ ಜಿಲ್ಲಾ ಎಸ್​ಪಿಯಾಗಿ ಅಧಿಕಾರ ಸ್ವೀಕರಿಸಿದ ಡಾ.ಅಮಟೆ ವಿಕ್ರಂ ಅವರು ಈ ನೂತನ ಪ್ರಯೋಗವನ್ನು ಜಾರಿಗೆ ತಂದಿದ್ದಾರೆ. ಇಂತಹ ಹೊಸ ತಂತ್ರಜ್ಞಾನವನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಬಳಸುತ್ತಿರುವುದರಿಂದ ಅಪರಾಧ ಹಿನ್ನೆಲೆಯ ವ್ಯಕ್ತಿಗಳನ್ನು ತಕ್ಷಣ ಪತ್ತೆ ಹಚ್ಚಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಾರ್ವಜನಿಕರು ಈ ಪ್ರಕ್ರಿಯೆಗೆ ಸಹಕಾರ ನೀಡಬೇಕೆಂದು ಡಾ.ಅಮಟೆ ವಿಕ್ರಂ ಕೋರಿದ್ದಾರೆ.

ಮೊಬೈಲ್​ ಕಳೆದುಕೊಂಡರೆ ಮೊಬಿಫೈ ಮೂಲಕ ವಾಪಸ್​ ಪಡೆಯಿರಿ:ಕಳೆದು ಹೋದ ಮೊಬೈಲ್​ ಅನ್ನು ಸುಲಭವಾಗಿ ಹುಡುಕಲು ಗದಗ ಜಿಲ್ಲಾ ಪೊಲೀಸ್​ ಇಲಾಖೆಯು ತಾಂತ್ರಿಕ ವ್ಯವಸ್ಥೆಯೊಂದನ್ನು ಜಾರಿ ಮಾಡಿದೆ. ಇಲಾಖೆಯು 'ಮೊಬಿಫೈ' ಎಂಬ ಆ್ಯಪ್​ ಅನ್ನು ಸಿದ್ಧಪಡಿಸಿದ್ದು, ಈ ಮೂಲಕ ಕಳೆದುಕೊಂಡ ಮೊಬೈಲ್​ ಅನ್ನು ಪತ್ತೆ ಮಾಡಬಹುದಾಗಿದೆ. ಆದರೆ ಇದಕ್ಕೆ ಕೆಲವೊಂದು ಪ್ರಕ್ರಿಯೆಗಳಿದ್ದು, ಅವುಗಳನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕಿದೆ.

ಹೀಗಾಗಿ ಮೊಬೈಲ್​ ಕಳೆದುಕೊಂಡ ತಕ್ಷಣ ಯಾರೂ ಕೂಡ ಪೊಲೀಸ್​ ಠಾಣೆಯ ಮೆಟ್ಟಿಲು ಹತ್ತಬೇಕಿಲ್ಲ. ಮೊಬಿಫೈ ಮೂಲಕ ಸುಲಭವಾಗಿ ನಿಮ್ಮ ಮೊಬೈಲ್​ ಮತ್ತೆ ನಿಮ್ಮ ಕೈ ಸೇರುತ್ತದೆ. ಸದ್ಯ ಈ ನೂತನ ಪ್ರಯೋಗವನ್ನು ಗದಗ ಜಿಲ್ಲೆಯಲ್ಲಿ ಮಾತ್ರ ಆರಂಭಿಸಲಾಗಿದೆ. ಇದರ ಸಾಧಕ- ಬಾಧಕಗಳನ್ನು ಪರಿಗಣಿಸಿ ಬಳಿಕ ಈ ಆ್ಯಪ್​ ಅನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಜಿಲ್ಲಾ ಪೊಲೀಸರು ನಿರ್ಧರಿಸಿದ್ದಾರೆ. ಇದು ರಾಜ್ಯದಲ್ಲಿಯೇ ಮೊದಲ ಬಾರಿಗೆ ಈ ರೀತಿಯ ಹೊಸ ಪ್ರಯೋಗವನ್ನು ಪೊಲೀಸ್​ ಇಲಾಖೆಯಿಂದ ಮಾಡಲಾಗಿದೆ.

ಇದನ್ನೂ ಓದಿ:ದುಷ್ಕೃತ್ಯ ಎಸಗುತ್ತಿದ್ದ ಪುಂಡರ ಚಳಿ ಬಿಡಿಸಿದ ಪೊಲೀಸರು: ಕೋಲಾರ ಎಸ್​ಪಿ ನೇತೃತ್ವದಲ್ಲಿ ಹೊಸ ಪ್ರಯೋಗ

For All Latest Updates

ABOUT THE AUTHOR

...view details